ನವದೆಹಲಿ: ಈ ವರ್ಷ ಭಾರತದ ವಿದ್ಯುತ್ ಬೇಡಿಕೆಯು ದಿನಕ್ಕೆ 40,000-45,000 ಮೆಗಾವ್ಯಾಟ್ನ ದಾಖಲೆಯ ಜಿಗಿತವನ್ನು ಕಂಡಿದೆ. ದೇಶದ ಉತ್ತರ ಭಾಗಗಳಲ್ಲಿ ತೀವ್ರವಾದ ಬಿಸಿಲ ಬೇಗೆ, ಆರ್ಥಿಕತೆಯ ವಿಸ್ತರಣೆ ಮತ್ತು ಲಕ್ಷಾಂತರ ವಿದ್ಯುತ್ ಇಲ್ಲದ ಮನೆಗಳಿಗೆ ವಿದ್ಯುತ್ ತಲುಪಿಸಿರುವುದು ವಿದ್ಯುತ್ ಬೇಡಿಕೆ ಹೆಚ್ಚಾಗಲು ಕಾರಣ ಎಂದು ಕೇಂದ್ರ ಇಂಧನ ಸಚಿವ ಆರ್ಕೆ ಸಿಂಗ್ ಹೇಳಿದ್ದಾರೆ.
ಮೋದಿ ಸರ್ಕಾರದ 8 ವರ್ಷಗಳ ಅವಧಿಯಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯದಲ್ಲಿ ಭಾರಿ ಸೇರ್ಪಡೆಯಾಗಿದೆ, ದೇಶವನ್ನು ಒಂದು ಪ್ರಸರಣ ಗ್ರಿಡ್ಗೆ ಸಂಯೋಜಿಸಲಾಗಿದೆ ಮತ್ತು ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಬಲಪಡಿಸಿ 23 ರಿಂದ 23.5 ಗಂಟೆಗಳ ಕಾಲ ವಿದ್ಯುತ್ ಪೂರೈಕೆಯನ್ನು ಖಾತ್ರಿಪಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಜೂನ್ 9 ರಂದು ಭಾರತದ ವಿದ್ಯುತ್ ಬೇಡಿಕೆಯು ಸಾರ್ವಕಾಲಿಕ ಗರಿಷ್ಠ 2,10,792 ಮೆಗಾವ್ಯಾಟ್ ದಾಖಲಾಗಿದೆ ಮತ್ತು 4,712 ಮಿಲಿಯನ್ ಯೂನಿಟ್ ವಿದ್ಯುತ್ ಅನ್ನು ಬಳಸಲಾಗಿದೆ ಎಂದಿದ್ದಾರೆ.
ಈ ಬೇಡಿಕೆಯನ್ನು ಪೂರೈಸಲು ವಿದ್ಯುತ್ ಸ್ಥಾವರಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದೇಶೀಯ ಪೂರೈಕೆಯಲ್ಲಿನ ಕೊರತೆಯನ್ನು ಪೂರೈಸಲು ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಸರ್ಕಾರ ಆದೇಶಿಸಿದೆ ಎಂದಿದ್ದಾರೆ.
ಕಳೆದ 8 ವರ್ಷಗಳಲ್ಲಿ ಇಡೀ ವಿದ್ಯುತ್ ಕ್ಷೇತ್ರವು ಬದಲಾಗಿದೆ ಎಂದ ಸಿಂಗ್ ಅವರು, “2014ದ ಮೊದಲು ನಾವು ವಿದ್ಯುತ್ ಕೊರತೆಯನ್ನು ಹೊಂದಿದ್ದೆವು ಮತ್ತು ಲೋಡ್ ಶೆಡ್ಡಿಂಗ್ ಸಾಮಾನ್ಯವಾಗಿತ್ತು” ಎಂದಿದ್ದಾರೆ.
ಎನ್ಜಿಒ ನಡೆಸಿದ ಸಮೀಕ್ಷೆಯ ಪ್ರಕಾರ, ರಾಷ್ಟ್ರೀಯ ಮಟ್ಟದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹಿಂದೆ ಸರಾಸರಿ 12.5 ಗಂಟೆಗಳ ವಿದ್ಯುತ್ ಲಭ್ಯತೆ ಇತ್ತು, ಇಂದು ಅದು 22.5 ಗಂಟೆಗೆ ಏರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.
17 ರಿಂದ 20 ರಷ್ಟು ಸರಾಸರಿ ಕೊರತೆಯನ್ನು ಹೊಂದಿದ್ದ ವಿದ್ಯುತ್ ಕೊರತೆಯ ರಾಷ್ಟ್ರವಾದ ಭಾರತವನ್ನು ವಿದ್ಯುತ್ ಹೆಚ್ಚುವರಿ ದೇಶವಾಗಿ ಪರಿವರ್ತಿಸಲಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.