ನವದೆಹಲಿ: ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತವನ್ನು ವಿಜಯದತ್ತ ಮುನ್ನಡೆಸಿದ ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿಪಿ ಮಲಿಕ್ ಅವರು ಕೇಂದ್ರದ ಅಗ್ನಿಪಥ್ ಯೋಜನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಮತ್ತು ಪ್ರತಿಭಟನೆಯ ಹೆಸರಲ್ಲಿ ಸಾರ್ವಜನಿಕ ಆಸ್ತಿಗಳಿಗೆ ಬೆಂಕಿ ಹಾಕುವವರು ಎಂದಿಗೂ ಸೇನೆಯ ಯೋಧರಾಗಲು ಸಾಧ್ಯವಿಲ್ಲ ಎಂದಿದ್ದಾರೆ.
ಪ್ರತಿಭಟನೆಯ ಸಂದರ್ಭದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಕಾರಣವಾದ ಗೂಂಡಾಗಳನ್ನು ನೇಮಿಸಿಕೊಳ್ಳಲು ಸೇನೆಯು ಆಸಕ್ತಿ ಹೊಂದಿಲ್ಲ ಎಂದು ವಿಪಿ ಮಲಿಕ್ ಹೇಳಿದ್ದಾರೆ.
ಅಗ್ನಿಪಥ್ ವಿರುದ್ಧ ಸೇನಾ ಆಕಾಂಕ್ಷಿಗಳ ಪ್ರತಿಭಟನೆ ತೀವ್ರಗೊಂಡಿದ್ದು, ಐದು ರಾಜ್ಯಗಳಾದ ಬಿಹಾರ, ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ ಮತ್ತು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಿಂಸಾಚಾರದ ಘಟನೆಗಳು ವರದಿಯಾಗಿದೆ. ರೈಲುಗಳಿಗೆ ಬೆಂಕಿ ಹಚ್ಚಲಾಗಿದೆ, ರೈಲು ಮತ್ತು ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಲಾಗಿದೆ, ಬಸ್ಗಳ ಕಿಟಕಿ ಗಾಜುಗಳನ್ನು ಒಡೆದು ಹಾಕಲಾಗಿದೆ ಮತ್ತು ಹೊಸ ಅಲ್ಪಾವಧಿ ಸೇನಾ ನೇಮಕಾತಿ ಯೋಜನೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಉದ್ರಿಕ್ತ ಯುವಕರು ಆಡಳಿತಾರೂಢ ಬಿಜೆಪಿ ಶಾಸಕ ಸೇರಿದಂತೆ ದಾರಿಹೋಕರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಪಿ ಮಲಿಕ್, “ಸಶಸ್ತ್ರ ಪಡೆಗಳು ಸ್ವಯಂಸೇವಕ ಪಡೆ ಎಂದು ನಾವು ಅರ್ಥಮಾಡಿಕೊಳ್ಳಬೇಕು. ಇದು ಕಲ್ಯಾಣ ಸಂಘಟನೆಯಲ್ಲ ಮತ್ತು ದೇಶಕ್ಕಾಗಿ ಹೋರಾಡುವ, ದೇಶವನ್ನು ರಕ್ಷಿಸುವ ಅತ್ಯುತ್ತಮ ವ್ಯಕ್ತಿಗಳನ್ನು ಹೊಂದಿರುವಂತಹ ಪಡೆ. ಗೂಂಡಾವಾದದಲ್ಲಿ ತೊಡಗಿರುವವರು, ರೈಲುಗಳು ಮತ್ತು ಬಸ್ಸುಗಳನ್ನು ಸುಡುವವರು ಸಶಸ್ತ್ರ ಪಡೆಗಳಲ್ಲಿ ಇರಲು ಯೋಗ್ಯರಾದವರಲ್ಲ” ಎಂದಿದ್ದಾರೆ.
“ಪ್ರತಿಭಟನೆ ನಿರತ ಕೆಲವರಿಗೆ ಈಗ ವಯಸ್ಸಾಗಿದೆ. ಅವರು ಅಗ್ನಿಪಥ್ ಯೋಜನೆಗೆ ಅರ್ಹರಾಗಿರುವುದಿಲ್ಲ. ಹಾಗಾಗಿ ಅವರ ಆತಂಕ ಮತ್ತು ಹತಾಶೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.