ಬೆಂಗಳೂರು: ಭಾರೀ ಕುತೂಹಲ ಕೆರಳಿಸಿದ್ದ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರು ಗೆಲುವು ಸಾಧಿಸಿದ್ದಾರೆ. ಈ ಮೂಲಕ ಅವರು ಎಂಟನೇ ಬಾರಿಗೆ ಮೇಲ್ಮನೆಯನ್ನು ಪ್ರವೇಶಿಸಿದ್ದಾರೆ.
ಬಸವರಾಜ ಹೊರಟ್ಟಿ ಅವರಿಗೆ ಅನಾಯಾಸವಾಗಿ ಗೆಲುವು ಒಲಿದುಬಂದಿದೆ. ಇನ್ನೂ ನಾಲ್ಕು ಸಾವಿರ ಮತಗಳ ಎಣಿಕೆ ಬಾಕಿ ಇರುವಾಗಲೇ ಅವರು ಜಯದ ನಗೆ ಬೀರಿದ್ದಾರೆ.
9,266 ಮೊದಲ ಪ್ರಾಶಸ್ತ್ಯ ಮತಗಳನ್ನು ಅವರು ಪಡೆದುಕೊಂಡಿದ್ದಾರೆ.
ಗೆಲುವಿನ ಬಳಿಕ ಮಾತನಾಡಿದ ಹೊರಟ್ಟಿಯವರು, “ಶಿಕ್ಷಕರ ಕೆಲಸಗಳನ್ನು ಮಾಡಿದ ಕಾರಣದಿಂದಲೇ ಹಿಂದಿನಂತೆ ಈ ಬಾರಿಯೂ ನಾನು ಗೆದ್ದು ಬಂದಿದ್ದೇನೆ. ಶಿಕ್ಷಕರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲು ಸಾಧ್ಯವಾಗದಿದ್ದರೂ, ಅವರು ನೆಮ್ಮದಿಯಿಂದ ಬದುಕು ನಡೆಸಲು ಅಗತ್ಯವಿರುವ ಕೆಲಸಗಳನ್ನು ಮುಂದೆಯೂ ಮಾಡುತ್ತೇನೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.