ನವದೆಹಲಿ: ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ (UNGA) ಮೊದಲ ಬಾರಿಗೆ ಹಿಂದಿ ಭಾಷೆಯನ್ನು ಉಲ್ಲೇಖಿಸುವ ಬಹುಭಾಷಾ ಕುರಿತು ಭಾರತ ಪ್ರಾಯೋಜಿತ ನಿರ್ಣಯವನ್ನು ಅಂಗೀಕರಿಸಿದೆ. ನಿನ್ನೆ ಅಂಗೀಕರಿಸಿದ ನಿರ್ಣಯದಿಂದಾಗಿ ಹಿಂದಿ ಸೇರಿದಂತೆ ಅಧಿಕೃತ ಮತ್ತು ಅಧಿಕೃತವಲ್ಲದ ಭಾಷೆಗಳಲ್ಲಿ ಪ್ರಮುಖ ಸಂವಹನ ಮತ್ತು ಸಂದೇಶಗಳನ್ನು ವಿಶ್ವಸಂಸ್ಥೆ ಪಸರಿಸಲಿದೆ.
ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಮಾತನಾಡಿ, ಬಹುಭಾಷಾವಾದವನ್ನು ವಿಶ್ವಸಂಸ್ಥೆಯ ಮೂಲ ತತ್ವವೆಂದು ಅಂಗೀಕರಿಸಲಾಗಿದೆ ಮತ್ತು ಬಹುಭಾಷಾವಾದವನ್ನು ಬೆಂಬಲಿಸಿದ್ದಕ್ಕಾಗಿ ಪ್ರಧಾನ ಕಾರ್ಯದರ್ಶಿಗೆ ಕೃತಜ್ಞತೆ ಎಂದರು. ಮೊಟ್ಟಮೊದಲ ಬಾರಿಗೆ ನಿರ್ಣಯದಲ್ಲಿ ಹಿಂದಿ, ಬಾಂಗ್ಲಾ ಮತ್ತು ಉರ್ದು ಅನ್ನು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದ್ದಾರೆ.
2018 ರಿಂದ, ಭಾರತವು ಯುಎನ್ ಡಿಪಾರ್ಟ್ಮೆಂಟ್ ಆಫ್ ಗ್ಲೋಬಲ್ ಕಮ್ಯುನಿಕೇಷನ್ಸ್ (ಡಿಜಿಸಿ) ಗೆ ಹಿಂದಿ ಭಾಷೆಯಲ್ಲಿ ಸುದ್ದಿ ಮತ್ತು ಮಲ್ಟಿಮೀಡಿಯಾ ವಿಷಯವನ್ನು ಕ್ರೋಢೀಕರಿಸಲು ಹೆಚ್ಚುವರಿ ಬಜೆಟ್ ಕೊಡುಗೆಯನ್ನು ನೀಡಿದೆ. ಈ ಪ್ರಯತ್ನಗಳ ಭಾಗವಾಗಿ, ‘ಹಿಂದಿ @ UN’ ಯೋಜನೆಯನ್ನು 2018 ರಲ್ಲಿ ಪ್ರಾರಂಭಿಸಲಾಯಿತು, ಹಿಂದಿ ಭಾಷೆಯಲ್ಲಿ ವಿಶ್ವಸಂಸ್ಥೆಯ ಸಾರ್ವಜನಿಕ ಪ್ರಭಾವವನ್ನು ಹೆಚ್ಚಿಸುವ ಉದ್ದೇಶದಿಂದ ಮತ್ತು ಪ್ರಪಂಚದಾದ್ಯಂತ ಲಕ್ಷಾಂತರ ಹಿಂದಿ ಮಾತನಾಡುವ ಜನಸಂಖ್ಯೆಗೆ ಜಾಗತಿಕ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಸಾಧ್ಯವಾಗುತ್ತದೆ.
ವಿಶ್ವಸಂಸ್ಥೆಯಲ್ಲಿ ಬಹುಭಾಷೆಯನ್ನು ನಿಜವಾದ ಅರ್ಥದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಮತ್ತು ಈ ಉದ್ದೇಶವನ್ನು ಸಾಧಿಸಲು ಭಾರತವು ವಿಶ್ವಸಂಸ್ಥೆಯನ್ನು ಬೆಂಬಲಿಸುತ್ತದೆ ಎಂದು ಭಾರತೀಯ ರಾಯಭಾರಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.