ನವದೆಹಲಿ: ಹಿಮಾಚಲ ಪ್ರದೇಶ ಭೇಟಿಯಲ್ಲಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇಂದು ಕುಲು ಮತ್ತು ಲಾಹುಲ್ ಸ್ಪಿತಿ ಜಿಲ್ಲೆಗಳನ್ನು ಸಂಪರ್ಕಿಸುವ ಅಟಲ್ ಸುರಂಗ ರೋಹ್ಟಂಗ್ (ಎಟಿಆರ್) ಗೆ ಭೇಟಿ ನೀಡಿದರು.
ಇಲ್ಲಿಗೆ ಬಂದಿಳಿದ ರಾಷ್ಟ್ರಪತಿಗಳಿಗೆ ಲಾಹೌಲ್ ಸ್ಪಿತಿಯಲ್ಲಿರುವ ಸಿಸು ಹೆಲಿಪ್ಯಾಡ್ನಲ್ಲಿ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು ಥಂಕಾ ಪೇಂಟಿಂಗ್ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಮತ್ತು ರಾಜ್ಯ ಸಚಿವ ರಾಮ್ ಲಾಲ್ ಮಾರ್ಕಂಡವೆರ್ ಉಪಸ್ಥಿತರಿದ್ದರು.
ರಾಷ್ಟ್ರಪತಿ ಕೋವಿಂದ್ ಅವರು ಅಟಲ್ ಸುರಂಗಕ್ಕೆ ಭೇಟಿ ನೀಡಿದ ಬಳಿಕ ಸಂತೋಷ ವ್ಯಕ್ತಪಡಿಸಿದ್ದಾರೆ ಮತ್ತ ಸುರಂಗದ ಅತ್ಯಂತ ಅತ್ಯಾಧುನಿಕ ನಿರ್ಮಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ರಾಷ್ಟ್ರದ ಭವಿಷ್ಯವು ಅಟಲ್ ಸುರಂಗದೊಂದಿಗೆ ಸಂಪರ್ಕ ಹೊಂದಿದೆ. ಮೂಲಸೌಕರ್ಯಗಳು ಹೆಚ್ಚಾದಷ್ಟೂ ರಾಷ್ಟ್ರವು ಪ್ರಗತಿ ಹೊಂದುತ್ತದೆ” ಎಂದು ಹೇಳಿದ್ದಾರೆ.
ಕುಲು ಮತ್ತು ಲಾಹೌಲ್-ಸ್ಪಿತಿ ಜಿಲ್ಲೆಗಳನ್ನು ಸಂಪರ್ಕಿಸುವ ಅಟಲ್ ಸುರಂಗ ರೋಹ್ಟಾಂಗ್ ಅನ್ನು 3 ಅಕ್ಟೋಬರ್ 2020 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. 9.2-ಕಿಲೋಮೀಟರ್ ಉದ್ದದ ಅಟಲ್ ಟನಲ್ ರೋಹ್ಟಂಗ್ 10,000 ಅಡಿ ಎತ್ತರದಲ್ಲಿನ ವಿಶ್ವದ ಅತಿ ಉದ್ದದ ಹೈವೇ ಸಿಂಗಲ್ ಟ್ಯೂಬ್ ಸುರಂಗವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.