ನವದೆಹಲಿ: ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕದ 2023 ರ ಆವೃತ್ತಿಯಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಅತ್ಯುನ್ನತ ಶ್ರೇಣಿಯ ಭಾರತೀಯ ಸಂಸ್ಥೆಯಾಗಿ ಹೊರಹೊಮ್ಮಿದೆ. ಒಂದು ವರ್ಷದಲ್ಲಿ ಬರೋಬ್ಬರಿ 31 ಸ್ಥಾನಗಳ ಜಿಗಿತವನ್ನು ಇದು ಕಂಡಿದೆ. ಭಾರತದಲ್ಲಿ ಐಐಟಿ-ಬಾಂಬೆಯನ್ನು ಇದು ಎರಡನೇ ಸ್ಥಾನಕ್ಕೆ ತಳ್ಳಿದೆ, ಐಐಟಿ-ದೆಹಲಿ ಮೂರನೇ ಸ್ಥಾನದಲ್ಲಿದೆ.
ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕದಲ್ಲಿ IISc 155 ನೇ ಸ್ಥಾನಗಳಿಸಿದೆ, ಐಐಟಿ-ಬಾಂಬೆ ಮತ್ತು ಐಐಟಿ-ದೆಹಲಿ ಕ್ರಮವಾಗಿ 172 ಮತ್ತು 174 ನೇ ಸ್ಥಾನ ಪಡೆದಿವೆ. ಇದು ಹಿಂದಿಗಿಂತ ಐದು ಮತ್ತು 11 ಸ್ಥಾನಗಳ ಏರಿಕೆ ಕಂಡಿವೆ. ಅಲ್ಲದೇ, ಇವು ಜಾಗತಿಕ ಲೀಗ್ನಲ್ಲಿ ಅಗ್ರಸ್ಥಾನದಲ್ಲಿರುವ ಇತರ ಭಾರತೀಯ ಸಂಸ್ಥೆಗಳಾಗಿವೆ.
ಜಾಗತಿಕವಾಗಿ ಅಗ್ರ ಸ್ಥಾನದಲ್ಲಿರುವ 1,000 ರಲ್ಲಿ ಭಾರತೀಯ ಸಂಸ್ಥೆಗಳ ಒಟ್ಟು ಸಂಖ್ಯೆಯು 22 ರಿಂದ 27 ಕ್ಕೆ ಏರಿದೆ.
ಶ್ರೇಯಾಂಕ ನೀಡಲು ಇರುವ ನಿಯತಾಂಕಗಳೆಂದರೆ – ಶೈಕ್ಷಣಿಕ ಘನತೆ (AR), ಉದ್ಯೋಗ ಒದಗಸುವ ಸಾಮರ್ಥ್ಯ (ER), ಅಧ್ಯಾಪಕ-ವಿದ್ಯಾರ್ಥಿ ಅನುಪಾತ (FSR), ಪ್ರತಿ ಅಧ್ಯಾಪಕರ ಅರ್ಹತೆ (CpF), ಅಂತರರಾಷ್ಟ್ರೀಯ ಅಧ್ಯಾಪಕರ ಅನುಪಾತ ಮತ್ತು ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಅನುಪಾತ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.