ಕೊಲಂಬೊ: ತೀವ್ರ ಆಹಾರದ ಕೊರತೆ ಮತ್ತು ಭೀಕರ ಆರ್ಥಿಕ ಬಿಕ್ಕಟ್ಟಿನ ನಡುವೆ ಯೂರಿಯಾ ಖರೀದಿಗಾಗಿ ಶ್ರೀಲಂಕಾವು ಭಾರತದಿಂದ 55 ಮಿಲಿಯನ್ ಡಾಲರ್ ಸಾಲವನ್ನು ಕೋರಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಆರ್ಥಿಕ ಬಿಕ್ಕಟ್ಟಿನಿಂದ ದ್ವೀಪ ರಾಷ್ಟ್ರದಲ್ಲಿ ಎದುರಾಗುತ್ತಿರುವ ಆಹಾರ ಬಿಕ್ಕಟ್ಟಿನ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಕೃಷಿಗಾಗಿ ಯೂರಿಯಾ ಖರೀದಿಸಲು ಭಾರತದೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಪ್ರಧಾನಿಯವರ ಪ್ರಸ್ತಾವನೆಗೆ ಸಂಪುಟ ಅನುಮೋದನೆ ನೀಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಕ್ಸ್ಪೋರ್ಟ್-ಇಂಪೋರ್ಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ USD 55 ಮಿಲಿಯನ್ ಸಾಲವನ್ನು ನೀಡಲು ಭಾರತ ಸರ್ಕಾರ ಒಪ್ಪಿಕೊಂಡಿದೆ ಎಂದು ಸರ್ಕಾರ ಹೇಳಿದೆ.
2022/23ರ ‘ಮಹಾ’ ಸುಗ್ಗಿ ಹಂಗಾಮಿಗೆ ಯೂರಿಯಾ ಖರೀದಿಗೆ ಸಾಲ ಪಡೆಯಲಾಗುತ್ತಿದೆ.
ರೈತರು ಎದುರಿಸುತ್ತಿರುವ ಕೊರತೆಗಳನ್ನು ಪರಿಹರಿಸಲು ತ್ವರಿತ ಕ್ರಮ ಕೈಗೊಂಡರೆ ಐದರಿಂದ ಆರು ತಿಂಗಳೊಳಗೆ ಪ್ರಸ್ತುತ ಕೃಷಿ ಕೊರತೆಯನ್ನು ನೀಗಿಸಬಹುದು ಎಂದು ವಿಕ್ರಮಸಿಂಘೆ ಹೇಳಿದ್ದಾರೆ.
ಮಾಜಿ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರು ಕಳೆದ ವರ್ಷ ರಾಸಾಯನಿಕ ಗೊಬ್ಬರ ಆಮದನ್ನು ನಿಷೇಧಿಸಲು ತೆಗೆದುಕೊಂಡ ನಿರ್ಧಾರದಿಂದಾಗಿ ಆ ದೇಶವು ಸುಮಾರು 50 ಪ್ರತಿಶತದಷ್ಟು ಬೆಳೆ ನಷ್ಟವನ್ನು ಎದುರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.