ನವದೆಹಲಿ: ಕೇಂದ್ರ ಸಂಸ್ಕೃತಿ ಖಾತೆಯ ರಾಜ್ಯ ಸಚಿವ ಮೀನಾಕ್ಷಿ ಲೇಖಿ ಅವರು ನವದೆಹಲಿಯಲ್ಲಿ 75 ನೇ ವರ್ಷದ ಸ್ವಾತಂತ್ರ್ಯದ 75 ದಿನಗಳ ಕೌಂಟ್ಡೌನ್ ಅನ್ನು ಪ್ರಾರಂಭಿಸಿದ್ದಾರೆ. ಇದಕ್ಕಾಗಿ ನಿನ್ನೆ ಕನ್ನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಲೇಖಿ, ಆಜಾದಿ ಕಾ ಅಮೃತ್ ಮಹೋತ್ಸವವು ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡಬೇಕಾದ ಎಲ್ಲಾ ಸಂಗತಿಗಳ ಮತ್ತು ಭಾರತದ ವೈವಿಧ್ಯತೆಯಲ್ಲಿ ಏಕತೆಯನ್ನು ತೋರಿಸುವ ಎಲ್ಲದರ ಆಚರಣೆಯಾಗಿದೆ ಎಂದಿದ್ದಾರೆ.
ಭಾರತವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸುವ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಭಾರತವನ್ನು ಸ್ವತಂತ್ರವಾಗಿಡಲು ಕೊಡುಗೆ ನೀಡಿದವರನ್ನು ನಾವೆಲ್ಲಾ ಮಾರ್ಗದರ್ಶಕ ಬೆಳಕಿನಂತೆ ಕಾಣಬೇಕು ಎಂದು ಅವರು ಹೇಳಿದರು.
ಇಂದು ದೇಶಕ್ಕಾಗಿ ಬದುಕುವ ಮತ್ತು ಅದರ ಅಭಿವೃದ್ಧಿಗಾಗಿ ಕೆಲಸ ಮಾಡುವ ಅವಶ್ಯಕತೆಯಿದೆ ಎಂದು ಅವರು ಹೇಳಿದರು.
ಸೆಂಟ್ರಲ್ ಪಾರ್ಕ್ನಲ್ಲಿ ಬೃಹತ್ ಪರದೆಯನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ ಈ ವರ್ಷದ ಆಗಸ್ಟ್ 15 ರವರೆಗೆ 75 ದಿನಗಳ ಕಾಲ ಕೌಂಟ್ಡೌನ್ ಪ್ಲೇ ಆಗುತ್ತದೆ. ಪರದೆಯು ದೇಶದ ತೆರೆಮರೆಯ ವೀರರ ಕಥೆಗಳನ್ನು ಸಹ ಪ್ಲೇ ಮಾಡಲಿದೆ. ಕಳೆದ ವರ್ಷ ಮಾರ್ಚ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯದ 75 ನೇ ವರ್ಷಕ್ಕೆ 75 ವಾರಗಳ ಕೌಂಟ್ಡೌನ್ ಅನ್ನು ಪ್ರಾರಂಭಿಸಿದ್ದರು.
Delighted to launch a 75-day countdown to the 75th Independence Day at the iconic Central Park, CP.
As part of the #AmritMahotsav, the countdown will further PM @narendramodi Ji’s vision to enhance the public enthusiasm,for AKAM to be a Jan Bhagidari movement.
75 Days to go!🇮🇳 pic.twitter.com/O9Fz3efDmT
— Meenakashi Lekhi (@M_Lekhi) June 1, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.