ನವದೆಹಲಿ: ಮೇ ತಿಂಗಳ ಜಿಎಸ್ಟಿ ಆದಾಯ 1,40,885 ಲಕ್ಷ ಕೋಟಿ ರೂಪಾಯಿ ಎಂದು ಮೂಲಗಳು ತಿಳಿಸಿವೆ. ಹಿಂದಿನ ಹಣಕಾಸು ವರ್ಷದ ಮೇ ತಿಂಗಳ ರೂ 97, 821 ಕ್ಕೆ ಹೋಲಿಸಿದರೆ ಇದು 44% ಹೆಚ್ಚಾಗಿದೆ.
ಜಿಎಸ್ಟಿ ಅನುಷ್ಠಾನವಾದ ಬಳಿಕ 4 ನೇ ಬಾರಿಗೆ ಜಿಎಸ್ಟಿ ಸಂಗ್ರಹವು 1.40 ಲಕ್ಷ ಕೋಟಿ ರೂಪಾಯಿ ಗಡಿ ದಾಟಿದೆ. ಆಮದು ಸರಕುಗಳ ಆದಾಯವು ಈ ತಿಂಗಳು 43% ರಷ್ಟು ಹೆಚ್ಚಾಗಿದೆ.
ಮೇ ತಿಂಗಳಲ್ಲಿನ ದೃಢವಾದ ಸಂಗ್ರಹವು ಸರ್ಕಾರದ ಹಣಕಾಸಿನ ಸ್ಥಿತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ಹಣದುಬ್ಬರದ ವಿರುದ್ಧ ಹೋರಾಡಲು ಇತ್ತೀಚೆಗೆ ನಡೆಸಿದ ತೆರಿಗೆ ಕಡಿತದಿಂದ ಉಂಟಾದ ಪರಿಣಾಮವನ್ನು ಎದುರಿಸಲ ಸಹಾಯ ಮಾಡುತ್ತದೆ.
“ಮೇ 2022 ರಲ್ಲಿ ಒಟ್ಟು GST ಆದಾಯವು 1,40,885 ಕೋಟಿ ರೂ.ಗಳಾಗಿದ್ದು, ಇದರಲ್ಲಿ CGST 25,036 ಕೋಟಿ ರೂ., SGST ರೂ. 32,001 ಕೋಟಿ, IGST ರೂ. 73,345 ಕೋಟಿ (ರೂ. 37469 ಕೋಟಿ ಸಂಗ್ರಹಣೆ ಮತ್ತು ಸರಕುಗಳ ಆಮದು ಸೇರಿದಂತೆ) 10,502 ಕೋಟಿ (ಸರಕುಗಳ ಆಮದು ಮೇಲೆ ಸಂಗ್ರಹಿಸಲಾದ 931 ಕೋಟಿ ಸೇರಿದಂತೆ)” ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.