ನವದೆಹಲಿ: ಕೆಂಟ್ ಆರ್ಒದ ನೀರು ಶುದ್ಧೀಕರಣ ಉತ್ಪನ್ನ ಜಾಹೀರಾತಿನಲ್ಲಿ ಖ್ಯಾತ ನಟಿ ಹೇಮಮಾಲಿನಿ ಕೆಂಟ್ ವಾಟರ್ ಪ್ಯೂರಿಫಯರ್ ’ವೈದ್ಯರ ಮೊದಲ ಆಯ್ಕೆ’ ಮತ್ತು ’ಎಲ್ಲದಕ್ಕಿಂತಲೂ ಅತ್ಯಂತ ಶುದ್ಧ ನೀರು’ ಎಂದು ಹೇಳುತ್ತಾರೆ. ಆದರೆ ಅವರ ಈ ಮಾತು ಸತ್ಯಕ್ಕೆ ದೂರವಾದುದು ಮತ್ತು ಆಧಾರ ರಹಿತವಾದುದು ಎಂದು ವೈದ್ಯರನ್ನೊಳಗೊಂಡ ಜಾಹೀರಾತು ಕಾವಲು ಸಮಿತಿ ಹೇಳಿದೆ.
ಕೇರಳ ಮೂಲದ ನೇತ್ರ ತಜ್ಞ ಡಾ. ಕೆ. ವಿ. ಬಾಬು ಅವರು, ’ಜಾಹೀರಾತಿನಲ್ಲಿ ಕೆಂಟ್ ಆರ್ಒ ವೈದ್ಯರ ಅನುಮೋದನೆ ಪಡೆದಿರುವ ನಂ. 1 ಉತ್ಪನ್ನ ಎಂದು ಹೇಳಲಾಗುತ್ತಿದೆ, ಈ ಮೂಲಕ ಜನರ ಗಮನ ಸೆಳೆಯುತ್ತಿದೆ’ ಎಂದು ಆರೋಪಿಸಿ ಭಾರತೀಯ ಜಾಹೀರಾತು ಗುಣಮಟ್ಟ ಪರಿಶೀಲನಾ ಸಂಸ್ಥೆಗೆ ದೂರು ನೀಡಿದ್ದರು.
ಭಾರತೀಯ ವೈದ್ಯಕೀಯ ಮಂಡಳಿ ನಿಯಮಗಳಲ್ಲಿ ಉಲ್ಲೇಖಿಸಿರುವಂತೆ ಶಸ್ತ್ರಚಿಕಿತ್ಸಕ ಉತ್ಪನ್ನ, ಉಪಕರಣ ಅಥವಾ ವಾಣಿಜ್ಯ ಉತ್ಪನ್ನಗಳ ಕುರಿತ ಜಾಹೀರಾತಿನಲ್ಲಿ ವೈದ್ಯರ ಅನುಮೋದನೆ ಪಡೆದಿರುವ ಬಗ್ಗೆ ಉಲ್ಲೇಖಿಸುವಂತಿಲ್ಲ ಎಂದು ಶಿಫಾರಸ್ಸು ಮಾಡಲಾಗಿತ್ತು.
ಈ ಜಾಹಿರಾತು ಬಗ್ಗೆ ಸಂಶೋಧನೆ ನಡೆಸಿರುವ ಮಹಿಳಾ ಆರೋಗ್ಯ ಸಂಸ್ಥೆ ಈ ಬ್ರ್ಯಾಂಡ್ಗಳ ಸಮರ್ಪಕ ಸಂಶೋಧನೆ ನಡೆಸಿಲ್ಲ. ಕೆಂಟ್ ಆರ್ಒ ತನ್ನ ನೀರಿನ ಮಾದರಿಗಳನ್ನು ಇತರ ಕಂಪೆನಿಗಳ ಉತ್ಪನ್ನಗಳ ಮಾದರಿಗಳ ಜೊತೆ ಪರಿಶೀಲಿಸಿಲ್ಲ ಎಂದು ಜಾಹೀರಾತು ಕಾವಲು ಸಮಿತಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.