ನವದೆಹಲಿ: ಹಿಂದೂ ಸಂಘಟನೆಗಳಿಗೆ ಮಹತ್ವದ ವಿಜಯ ದೊರೆತಿದ್ದು, ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯವು ಹಿಂದೂ ಸ್ವಸ್ತಿಕ ಚಿಹ್ನೆಯ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನು ಗುರುತಿಸಿದೆ.
ನಾಜಿ ಚಿಹ್ನೆ ನಿಷೇಧ ಮಸೂದೆ 2022 ಅನ್ನು ವಿಕ್ಟೋರಿಯನ್ ಸರ್ಕಾರವು ಪರಿಚಯಿಸಿದೆ, ಇದರ ಅನ್ವಯ ನಾಜಿ ಚಿಹ್ನೆ ಹಕೆನ್ಕ್ರೂಜ್ ಅನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಕ್ರಿಮಿನಲ್ ಅಪರಾಧವಾಗಿದೆ. ಕಾಯ್ದೆ ಜಾರಿಗೆ ಬಂದ ನಂತರ, ಸಾರ್ವಜನಿಕವಾಗಿ ನಾಜಿ ಚಿಹ್ನೆಯನ್ನು ಉದ್ದೇಶಪೂರ್ವಕವಾಗಿ ಪ್ರದರ್ಶಿಸುವವರ ವಿರುದ್ಧ ಸುಮಾರು $22,000 ವರೆಗೆ ದಂಡ ಅಥವಾ 12 ತಿಂಗಳ ಸೆರೆವಾಸ ವಿಧಿಸಲಾಗುತ್ತದೆ.
ಇದೇ ವೇಳೆ ಮಸೂದೆ ಹಿಂದೂಗಳು ಸ್ವಸ್ತಿಕ ಚಿಹ್ನೆಯನ್ನು ಬಳಸಲು ಅನುವು ನೀಡಿದೆ ಮತ್ತು ಹಿಂದೂಗಳು, ಜೈನರು, ಬೌದ್ಧರು ಮತ್ತು ಇತರ ಧಾರ್ವಿುಕ ಸಮುದಾಯಗಳಿಗೆ ಸ್ವಸ್ತಿಕ ಹೊಂದಿರುವ ಮಹತ್ವವನ್ನು ಗುರುತಿಸಿದೆ.
ಅಟಾರ್ನಿ ಜನರಲ್ ಜಾಕ್ಲಿನ್ ಸೈಮ್ಸ್ ನಾಜಿ ಹಕೆನ್ಕ್ರೂಜ್ ಚಿಹ್ನೆ ಮತ್ತು ಹಿಂದೂ ಸ್ವಸ್ತಿಕ ಚಿಹ್ನೆಗಳ ನಡುವೆ ಇರುವ ವ್ಯತ್ಯಾಸವನ್ನು ಎತ್ತಿ ತೋರಿಸಿದ್ದಾರೆ. ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ಸ್ವಸ್ತಿಕದ ಮೂಲಗಳು, ಅದರ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಸಮುದಾಯ ಶಿಕ್ಷಣ ಅಭಿಯಾನಕ್ಕೆ ಅವಕಾಶ ನೀಡುವ ಕಾನೂನು ಒಂದು ವರ್ಷದ ನಂತರ ಜಾರಿಗೆ ಬರಲಿದೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.