ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ಬೆಳಿಗ್ಗೆ ಜಮೈಕಾ ಮತ್ತು ಸೇಂಟ್ ವಿನ್ಸೆಂಟ್ & ಗ್ರೆನಡೈನ್ಸ್ಗೆ ಪ್ರವಾಸ ಆರಂಭಿಸಿದ್ದಾರೆ. ಈ ಕೆರಿಬಿಯನ್ ರಾಷ್ಟ್ರಗಳಿಗೆ ಭಾರತದ ರಾಷ್ಟ್ರಪತಿಗಳು ಭೇಟಿ ನೀಡುತ್ತಿರುವುದು ಇದೇ ಮೊದಲು.
ಕೋವಿಂದ್ ಈ ತಿಂಗಳ 15 ರಿಂದ 18 ರವರೆಗೆ ಜಮೈಕಾದಲ್ಲಿ ಇರುತ್ತಾರೆ, ಅಲ್ಲಿ ಅವರು ಜಮೈಕಾದ ಗವರ್ನರ್ ಜನರಲ್ ಸರ್ ಪ್ಯಾಟ್ರಿಕ್ ಅಲೆನ್ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆ ನಡೆಸಲಿದ್ದಾರೆ. ಅವರು ಪ್ರಧಾನ ಮಂತ್ರಿ ಆಂಡ್ರ್ಯೂ ಹೋಲ್ನೆಸ್ ಮತ್ತು ಇತರ ಗಣ್ಯರನ್ನು ಭೇಟಿಯಾಗಲಿದ್ದಾರೆ. ಜಮೈಕಾ ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಭಾರತ ಮತ್ತು ಜಮೈಕಾ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 60 ನೇ ವಾರ್ಷಿಕೋತ್ಸವ 2022 ಆಗಿರುವುದರಿಂದ ಈ ಭೇಟಿಯು ಮಹತ್ವದ ಮೈಲಿಗಲ್ಲಾಗಿದೆ.
ಕೋವಿಂದ್ ಅವರು ಇದೇ ತಿಂಗಳ 18 ರಿಂದ 21 ರವರೆಗೆ ಸೇಂಟ್ ವಿನ್ಸೆಂಟ್ & ಗ್ರೆನಡೈನ್ಸ್ (SVG) ಗೆ ಭೇಟಿ ನೀಡಲಿದ್ದಾರೆ ಮತ್ತು ಅಲ್ಲಿನ ಗವರ್ನರ್ ಜನರಲ್ ಸುಸಾನ್ ಡೌಗನ್ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಪ್ರಧಾನಿ ಡಾ. ರಾಲ್ಫ್ ಗೊನ್ಸಾಲ್ವಿಸ್ ಮತ್ತು ಇತರ ಗಣ್ಯರನ್ನು ಭೇಟಿಯಾಗಲಿದ್ದಾರೆ. ಅಲ್ಲಿನ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.