ಹೈದರಾಬಾದ್: ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಗಗನಯಾನ ಕಾರ್ಯಕ್ರಮಕ್ಕಾಗಿ ಮಾನವ ಶ್ರೇಣಿಯ ಘನ ರಾಕೆಟ್ ಬೂಸ್ಟರ್ನ (HS200) ಸ್ಥಾಯೀ ಪರೀಕ್ಷೆಯನ್ನು ಇಸ್ರೋ ಇಂದು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
HS200 ರಾಕೆಟ್ ಬೂಸ್ಟರ್ ಎನ್ನುವುದು GSLV Mk III ಉಪಗ್ರಹ ಉಡಾವಣಾ ವಾಹನದ ಉತ್ತಮವಾಗಿ ಸಾಬೀತಾಗಿರುವ S200 ರಾಕೆಟ್ ಬೂಸ್ಟರ್ನ ಮಾನವ ರೇಟೆಡ್ ಆವೃತ್ತಿಯಾಗಿದೆ, ಇದನ್ನು LVM3 ಎಂದು ಕರೆಯಲಾಗುತ್ತದೆ.
ಈ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಇಸ್ರೋದ ಪ್ರತಿಷ್ಠಿತ ಮಾನವ ಬಾಹ್ಯಾಕಾಶ ಹಾರಾಟದ ಗಗನಯಾನಕ್ಕೆ ಪ್ರಮುಖ ಮೈಲಿಗಲ್ಲಾಗಿದೆ. ಏಕೆಂದರೆ ಉಡಾವಣಾ ವಾಹನದ ಮೊದಲ ಹಂತವನ್ನು ಪೂರ್ಣ ಅವಧಿಗೆ ಅದರ ಕಾರ್ಯಕ್ಷಮತೆಗಾಗಿ ಪರೀಕ್ಷಿಸಲಾಗುತ್ತದೆ.
HS200 ಬೂಸ್ಟರ್ನ ವಿನ್ಯಾಸ ಮತ್ತು ಅಭಿವೃದ್ಧಿ ತಿರುವನಂತಪುರಂನ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ (VSSC) ಪೂರ್ಣಗೊಂಡಿದೆ.
ISRO successfully completed the static test of a human-rated solid rocket booster (HS200) for the Gaganyaan Programme at Satish Dhawan Space Centre (SDSC), Sriharikota, Andhra Pradesh today at 7:20am: ISRO
(Source: ISRO) pic.twitter.com/ctY8RCPQmv
— ANI (@ANI) May 13, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.