ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೌದ್ಧರ ಪವಿತ್ರ ಸ್ಥಳ ಬೋಧಗಯಾಕ್ಕೆ ತೆರಳಿ, ಮಹಾಬೋಧಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು. 2,550 ವರ್ಷಗಳ ಹಿಂದೆ ಗೌತಮ ಬುದ್ಧ ಜ್ಞಾನೋದಯವನ್ನು ಪಡೆದ ಮಹಾಬೋಧಿ ವೃಕ್ಷದ ಕೆಳಗೆ ಕೂತು ಕೆಲಕಾಲ ಧ್ಯಾನ ಮಾಡಿದರು.
‘ಗಯಾ ಏರ್ಪೋರ್ಟ್ನಿಂದ ಇಳಿದು ನೇರವಾಗಿ ಅವರು 1500 ವರ್ಷಗಳ ಇತಿಹಾಸವಿರುವ ಮಹಾಬೋಧಿ ದೇಗುಲಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು’ ಎಂದು ದೇಗುಲದ ಕಾರ್ಯದರ್ಶಿ ಎನ್.ದೊರ್ಜಿ ತಿಳಿಸಿದ್ದಾರೆ.
ಇಲ್ಲಿ ನಡೆಯುತ್ತಿರುವ ಮೂರು ದಿನಗಳ ಇಂಟರ್ನ್ಯಾಷನಲ್ ಬುದ್ಧಿಸ್ಟ್ ಕಾನ್ಕ್ಲೇವ್ನ ಸಮಾರೋಪ ಸಮಾರಂಭದಲ್ಲಿ ಅವರು ಭಾಗಿಯಾಗಲಿದ್ದಾರೆ. ಅಲ್ಲದೇ ದೇಗುಲ ಆವರಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಮಾರಂಭದಲ್ಲಿ ದೇಶ ವಿದೇಶಗಳ 90 ನಾಯಕರುಗಳು ಭಾಗಿಯಾಗಲಿದ್ದಾರೆ.
ಮೋದಿ ಭೇಟಿ ಹಿನ್ನಲೆಯಲ್ಲಿ ಬೋಧಗಯಾ ಭದ್ರ ಕೋಟೆಯಾಗಿ ಪರಿವರ್ತನೆಗೊಂಡಿದ್ದು, ಭಾರೀ ಸಂಖ್ಯೆಯಲ್ಲಿ ರಕ್ಷಣಾ ಪಡೆಗಳನ್ನು ನಿಯೋಜಿಸಲಾಗಿದೆ. ಜವಹಾರ್ ಲಾಲ್ ನೆಹರೂರವರ ಬಳಿಕ ಬೋಧಗಯಾಕ್ಕೆ ತೆರಳುತ್ತಿರುವ ಮೊದಲ ಪ್ರಧಾನಿ ಮೋದಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.