ಚೆನ್ನೈ: ದುಬಾರಿಯಾಗಿರುವ ಈ ಕಾಲದಲ್ಲೂ ಒಂದು ರೂಪಾಯಿಗೆ ಇಡ್ಲಿ ಕೊಡುವ ಮಹಾತಾಯಿ ತಮಿಳುನಾಡಿನ ಕಮಲತ್ತಾಳ್ ಅವರಿಗೆ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಕಮಲತ್ತಾಳ್ ಅವರು 85ರ ಇಳಿವಯಸ್ಸಿನಲ್ಲೂ ನಿತ್ಯ ನೂರಾರು ಇಡ್ಲಿ ಬೇಯಿಸಿ ಅದನ್ನು ಒಂದು ರೂಪಾಯಿಗೆ ಮಾರಾಟ ಮಾಡುವ ಮೂಲಕ ಬಡವರ ಹೊಟ್ಟೆ ತುಂಬಿಸುತ್ತಿದ್ದಾರೆ. ಅನೇಕ ವರ್ಷಗಳಿಂದ ಅವರು ಈ ಕಾರ್ಯವನ್ನು ಮಾಡುತ್ತಾ ಬರುತ್ತಿದ್ದಾರೆ. ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡಿದ ಬಳಿಕ ಆನಂದ ಮಹಿಂದ್ರಾ ಅವರಿಗೆ ಮನೆ ಕಟ್ಟಿಕೊಡುವ ಭರವಸೆ ನೀಡಿದ್ದರು. ಅದರಂತೆ ಅವರ ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
ಚೊಕ್ಕವಾದ ಈ ಮನೆಯಲ್ಲಿ ಇಡ್ಲಿ ಬೆಳೆಯುವುದಕ್ಕಾಗಿ ಪ್ರತ್ಯೇಕ ಕೊನೆಯ ವ್ಯವಸ್ಥೆ ಮಾಡಲಾಗಿದೆ.
ಮನೆ ಉಡುಗೊರೆ ಸಿಕ್ಕಿರುವುದಕ್ಕೆ ಕಮಲತ್ತಾಳ್ ಅವರು ಅತೀವ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ತಿಂಗಳ ಕೊನೆಗೆ ಗೃಹಪ್ರವೇಶ ನೆರವೇರಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಆನಂದ್ ಮಹೀಂದ್ರಾ ಅವರ ಕಾರ್ಯಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದು ಬರುತ್ತಿದೆ.
Coimbatore, Tamil Nadu | Kamalathal, fondly called 'Idli Paati' known for selling idlis for Re 1, got a new house from Mahindra Group
"I am very happy that I have got a new house now and will shift to the new house by end of this month," she said (10.05) pic.twitter.com/e1BL5qmasT
— ANI (@ANI) May 11, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.