ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮೂರು ರಾಷ್ಟ್ರಗಳ ಪ್ರವಾಸ ಅತ್ಯಂತ ಫಲದಾಯಕವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಟ್ವೀಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ, “ಪ್ರಧಾನಿ ನರೇಂದ್ರ ಮೋದಿಯವರ ಮೂರು ದಿನಗಳ ಮೂರು ರಾಷ್ಟ್ರಗಳ ಪ್ರವಾಸ ಅತ್ಯಂತ ಫಲಪ್ರದವಾಗಿದೆ. ಹೂಡಿಕೆ ಮತ್ತು ವ್ಯಾಪಾರ ಒಪ್ಪಂದಗಳು, ಶುದ್ಧ ಇಂಧನಗಳಿಗೆ ಸಂಬಂಧಿಸಿದ ಹೊಸ ಪಾಲುದಾರಿಕೆಗಳು, ಕೌಶಲ್ಯ ಅಭಿವೃದ್ಧಿ ಮತ್ತು ನಾವಿನ್ಯತೆಯ ಸಹಭಾಗಿತ್ವ ಹಾಗೂ ಯುರೋಪ್ನ ಪಾಲುದಾರರೊಂದಿಗೆ ಸಹಕಾರ ಬಲಗೊಂಡಿದೆ” ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಯುರೋಪ್ ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ನಿನ್ನೆ ಫ್ರಾನ್ಸಿಗೆ ಆಗಮಿಸಿದ್ದಾರೆ. ಅಲ್ಲಿಂದ ಅವರು ಭಾರತಕ್ಕೆ ಪ್ರಯಾಣ ಬೆಳೆಸಿದ್ದಾರೆ.
“ನನ್ನ ಫ್ರಾನ್ಸ್ ಭೇಟಿಯು ಕಡಿಮೆ ಅವಧಿಯದ್ದಾಗಿದ್ದರೂ ಹೆಚ್ಚು ಫಲಪ್ರದವಾಗಿದೆ” ಎಂದು ಮೋದಿ ಹೇಳಿದ್ದಾರೆ.
ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವ ಸಂದರ್ಭದಲ್ಲಿ ಮೋದಿ ಅವರು ಯುರೋಪ್ ಪ್ರವಾಸ ಹಮ್ಮಿಕೊಂಡಿರುವುದು ಮಹತ್ವ ಪಡೆದುಕೊಂಡಿದೆ. ರಷ್ಯಾ ವಿರುದ್ಧದ ನಿಲುವನ್ನು ಯುರೋಪಿಯನ್ ರಾಷ್ಟ್ರಗಳು ತೆಗೆದುಕೊಂಡಿವೆ.
PM @narendramodi’s 3-day, 3-nation tour was immensely productive.
➡️Advanced trade & investment ties
➡️Forged new green partnerships
➡️Promoted collaborations for innovation and skill development
➡️Strengthened the spirit of cooperation with our European partners pic.twitter.com/2FaLfwBdDe— Randhir Jaiswal (@MEAIndia) May 4, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.