ನವದೆಹಲಿ: ಜಗತ್ತು ಸಮಸ್ಯೆ ಎದುರಿಸಿದಾಗಲೆಲ್ಲ ಭಾರತ ಪರಿಹಾರಕ್ಕೆ ಮುಂದಾಗುತ್ತದೆ, ಇದು ನವ ಭಾರತದ ಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕಳೆದ ರಾತ್ರಿ ಜರ್ಮನಿಯ ಬರ್ಲಿನ್ನಲ್ಲಿ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಿದ ಮೋದಿ, ಕನಿಷ್ಠ ಸರ್ಕಾರ ಮತ್ತು ಗರಿಷ್ಠ ಆಡಳಿತದ ಮಂತ್ರವನ್ನು ಅನುಸರಿಸುವ ಅಗತ್ಯವಿದೆ . ರಾಷ್ಟ್ರದ ಜನರು ತಮ್ಮ ಅಭಿವೃದ್ಧಿಗೆ ಶ್ರಮಿಸಿದಾಗ ದೇಶವು ಪ್ರಗತಿ ಹೊಂದುತ್ತದೆ. ಈ ಮೂಲಕ ಅವರು ಸರ್ಕಾರದ ಹೊರೆಯನ್ನು ಕಡಿಮೆ ಮಾಡುತ್ತಿದ್ದಾರೆ ಮತ್ತು ನವ ಭಾರತದ ನಿರ್ಮಾಣಕ್ಕೆ ಕೊಡುಗೆ ನೀಡುತ್ತಾರೆ ಎಂದರು.
“ಸುಧಾರಣೆಗೆ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ. 8 ವರ್ಷಗಳ ಹಿಂದೆ 200 ರಿಂದ 400 ಸ್ಟಾರ್ಟ್ಅಪ್ಗಳು ಭಾರತದಲ್ಲಿ ಇತ್ತು, ಇಂದು 68 ಸಾವಿರ ಸ್ಟಾರ್ಟ್ಅಪ್ಗಳನ್ನು ಹೊಂದಿವೆ. ಇಂದು ಭಾರತವು ಅನೇಕ ಯುನಿಕಾರ್ನ್ಗಳನ್ನು ಹೊಂದಿದ್ದು, ಅವುಗಳನ್ನು ಡೆಕಾಕಾರ್ನ್ಗಳಾಗಿ ಪರಿವರ್ತಿಸಲಾಗುತ್ತಿದೆ ಎಂದು ಅವರು ಹೇಳಿದರು.
ಏಪ್ರಿಲ್ ತಿಂಗಳ ಜಿಎಸ್ಟಿ ಸಂಗ್ರಹದಲ್ಲಿ ಭಾರತವು ದಾಖಲೆಯ 1.68 ಲಕ್ಷ ಕೋಟಿ ರೂಪಾಯಿಗಳನ್ನು ಸಾಧಿಸಿದೆ ಎಂದು ಪ್ರಧಾನಿ ಹೇಳಿದರು.
ಪ್ರಧಾನಿ ಮೋದಿ ಅವರು ಬರ್ಲಿನ್ನಲ್ಲಿ ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗೆ ವ್ಯಾಪಾರ ಸಭೆಯ ಸಹ-ಅಧ್ಯಕ್ಷತೆ ವಹಿಸಿದ್ದರು. ತಮ್ಮ ಹೇಳಿಕೆಗಳಲ್ಲಿ, ಪ್ರಧಾನಮಂತ್ರಿಯವರು ತಮ್ಮ ಸರ್ಕಾರವು ಕೈಗೊಂಡ ಸುಧಾರಣೆಗಳನ್ನು ಒತ್ತಿಹೇಳಿದರು. ಭಾರತದ ಯುವಜನತೆಯ ಮೇಲೆ ಹೂಡಿಕೆ ಮಾಡುವಂತೆ ಅವರು ಉದ್ಯಮಿಗಳನ್ನು ಆಹ್ವಾನಿಸಿದರು.
ಪ್ರಧಾನಿ ಮೋದಿ ಮತ್ತು ಜರ್ಮನಿಯ ಚಾನ್ಸೆಲರ್ ನಿನ್ನೆ ಭಾರತ-ಜರ್ಮನಿ ಅಂತರ-ಸರ್ಕಾರಿ ಸಮಾಲೋಚನೆಗಳ (ಐಜಿಸಿ) ಆರನೇ ಆವೃತ್ತಿಯ ಸಹ-ಅಧ್ಯಕ್ಷತೆ ವಹಿಸಿದ್ದರು.
ಭಾರತ ಮತ್ತು ಜರ್ಮನಿ ನಡುವೆ ನಡೆದ ಅಂತರ-ಸರ್ಕಾರಿ ಸಮಾಲೋಚನೆಗಳು ಅವರ ಪಾಲುದಾರಿಕೆಗೆ ಹೊಸ ದಿಕ್ಕನ್ನು ನೀಡಿದೆ ಎಂದು ಮೋದಿ ಹೇಳಿದರು. ಭಾರತದ ಗ್ರೀನ್ ಗೋಲ್ ಯೋಜನೆಗಳನ್ನು ಬೆಂಬಲಿಸಲು ಜರ್ಮನಿ ಬದ್ಧವಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜರ್ಮನಿಯಲ್ಲಿ ನಡೆಯಲಿರುವ ಜಿ-7 ಶೃಂಗಸಭೆಗೆ ಜರ್ಮನಿಯ ಚಾನ್ಸೆಲರ್ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದರು. ಜಾಗತಿಕ ಆರ್ಥಿಕತೆ ಮತ್ತು ಹವಾಮಾನ ಬದಲಾವಣೆ ಮಾತುಕತೆಯಲ್ಲಿ ಭಾರತದ ಪಾತ್ರ ಮಹತ್ವದ್ದಾಗಿದೆ ಎಂದು ಅವರು ಹೇಳಿದರು. ಭವಿಷ್ಯದ ಸಂಬಂಧಗಳು ಹಲವು ದೇಶಗಳಿಂದ ಗುರುತಿಸಲ್ಪಟ್ಟರೆ ಮಾತ್ರ ಜಗತ್ತು ಅಭಿವೃದ್ಧಿ ಹೊಂದುತ್ತದೆಯೇ ಹೊರತು ಕೆಲವು ಶಕ್ತಿಶಾಲಿ ರಾಷ್ಟ್ರಗಳಿಂದಲ್ಲ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.