ಕೊಚ್ಚಿ: ಕೇರಳದಲ್ಲಿನ ಕ್ರಿಕೆಟ್ ಸ್ಟೇಡಿಯಂವೊಂದಕ್ಕೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಹೆಸರನ್ನಿಡಲು ಅಲ್ಲಿನ ಕ್ರಿಕೆಟ್ ಅಸೋಸಿಯೇಶನ್ ನಿರ್ಧರಿಸಿದೆ.
ಈಗಾಗಲೇ ಕೇರಳದ ಜವಹಾರ್ ಲಾಲ್ ನೆಹರು ಸ್ಟೇಡಿಯಂನ ಪೆವಿಲಿಯನ್ ಒಂದಕ್ಕೆ ಸಚಿನ್ ಅವರ ಹೆಸರನ್ನು ಇಡಲಾಗಿದೆ. ಇದೀಗ ಸ್ಟೇಡಿಯಂವೊಂದಕ್ಕೆ ಅವರ ಹೆಸರನ್ನಿಡಲು ನಿರ್ಧರಿಸಲಾಗಿದೆ ಎಂದು ಕೇರಳ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಟಿ.ಚಿ.ಮ್ಯಾಥ್ಯು ತಿಳಿಸಿದ್ದಾರೆ.
ವಯನಾಡ್ನಲ್ಲಿ ಹೊಸದಾಗಿ ಕ್ರಿಕೆಟ್ ಸ್ಟೇಡಿಯಂ ರಚಿಸಲಾಗಿದೆ, ಅದಕ್ಕೆ ಅಥವಾ ಬೇರೆ ಸ್ಟೇಡಿಯಂಗೆ ಸಚಿನ್ ಹೆಸರು ಇಡುತ್ತೇವೆ. ಯಾವ ಸ್ಟೇಡಿಯಂ ಎಂದು ಇನ್ನು ನಿರ್ಧಾರವಾಗಬೇಕು ಎಂದು ಅವರು ಹೇಳಿದ್ದಾರೆ.
ಕೇರಳದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಸಚಿನ್ ಅಲ್ಲಿ ಮನೆಯೊಂದನ್ನು ಖರೀದಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.