ಮುಂಬಯಿ: ಪ್ರಾಜೆಕ್ಟ್ 75 ರ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಆರು ಜಲಾಂತರ್ಗಾಮಿ ನೌಕೆಗಳಲ್ಲಿ ಕೊನೆಯದಾದ ಐಎನ್ಎಸ್ ವಾಗ್ಶೀರ್ ಅನ್ನು ಮಜಗಾನ್ ಡಾಕ್ ಶಿಪ್ ಬಿಲ್ಡರ್ಸ್ ಮುಂಬಯಿಯಲ್ಲಿ ಅನಾವರಣಗೊಳಿಸಿದೆ.
ಜಲಾಂತರ್ಗಾಮಿ ನೌಕೆಯನ್ನು ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಅನಾವರಣ ಮಾಡಿದರು.
ಅನಾವರಣದ ನಂತರ, ಜಲಾಂತರ್ಗಾಮಿ ನೌಕೆಯು ಸಂಪೂರ್ಣ ಯುದ್ಧಕ್ಕೆ ಯೋಗ್ಯವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಒಂದು ವರ್ಷಕ್ಕೂ ಹೆಚ್ಚು ಕಾಲ ಸಮಗ್ರ ಮತ್ತು ಕಠಿಣ ಪರೀಕ್ಷೆಗಳು ಮತ್ತು ಪ್ರಯೋಗಗಳಿಗೆ ಒಳಗಾಗುತ್ತದೆ.
ಹಿಂದೂ ಮಹಾಸಾಗರದ ಆಕ್ರಮಣಕಾರಿ ಸ್ಯಾಂಡ್ಫಿಶ್ನ ಹೆಸರನ್ನು ಇದಕ್ಕೆ ಇಡಲಾಗಿದೆ, ಮೊದಲ ಜಲಾಂತರ್ಗಾಮಿ ‘ವಾಗ್ಶೀರ್’ ಅನ್ನು ಡಿಸೆಂಬರ್ 1974 ರಲ್ಲಿ ನಿಯೋಜಿಸಲಾಯಿತು. ಇದನ್ನು ಏಪ್ರಿಲ್ 1997 ರಲ್ಲಿ ನಿಷ್ಕ್ರಿಯಗೊಳಿಸಲಾಯಿತು.
ನೌಕಾಪಡೆಯು ಪ್ರಾಜೆಕ್ಟ್-75 ಅಡಿಯಲ್ಲಿನ ಐಎನ್ಎಸ್ ಕಲ್ವರಿ, ಐಎನ್ಎಸ್ ಖಂಡೇರಿ ಮತ್ತು ಐಎನ್ಎಸ್ ಕರಂಗ್ ಅನ್ನು ಈಗಾಗಲೇ ಕಾರ್ಯಾರಂಭ ಮಾಡಲಾಗಿದೆ.5ನೇ ಐಎನ್ಎಸ್ ಸಮುದ್ರ ಪ್ರಯೋಗ ಆರಂಭಿಸಿದೆ. ಇದೀಗ ಹೊಸ ಸೇರ್ಪಡೆ ಐಎನ್ಎಸ್ ವಾಗ್ಶೀರ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.