ನವದೆಹಲಿ: ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರು ಸೋಮವಾರ ಭೂಸೇನಾ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
“ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರು ಸೋಮವಾರದಂದು ಮುಂದಿನ ಸೇನಾ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ ಮತ್ತು ಅವರು ಏಪ್ರಿಲ್ 30 ರಂದು ನಿವೃತ್ತರಾಗುತ್ತಿರುವ ಜನರಲ್ ನರವಾಣೆ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಲೆಫ್ಟಿನೆಂಟ್ ಜನರಲ್ ಪಾಂಡೆ ಅವರು COAS ಆಗಿ ನೇಮಕಗೊಂಡ ಮೊದಲ ಇಂಜಿನಿಯರ್ ಆಗಿರುತ್ತಾರೆ. ಪ್ರಸ್ತುತ ಅವರು ಸೇನೆಯ ಉಪ ಮುಖ್ಯಸ್ಥರಾಗಿದ್ದಾರೆ” ಎಂದು ಮೂಲಗಳು ತಿಳಿಸಿವೆ.
ಮನೋಜ್ ಪಾಂಡೆ ಅವರು 61ನೇ ಎನ್ಡಿಎ (ನ್ಯಾಷನಲ್ ಡಿಫೆನ್ಸ್ ಅಕಾಡೆಮಿ) ಬ್ಯಾಚ್ನ ಸೇನಾಧಿಕಾರಿ. ಭಾರತೀಯ ಸಶಸ್ತ್ರ ಪಡೆಗಳ ನಮ್ಮ ಮೂವರು ಮುಖ್ಯಸ್ಥರು ಈಗ ಅದೇ ಎನ್ಡಿಎ ಬ್ಯಾಚ್ನಿಂದ ಬಂದವರಾಗಿರುವುದು ವಿಶೇಷ.
ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಹರಿ ಕುಮಾರ್ ಮತ್ತು ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಎಲ್ಲರೂ 61 ನೇ ಎನ್ಡಿಎ ಬ್ಯಾಚ್ನ ಭಾಗವಾಗಿದ್ದವರು ಎಂಬುದು ವಿಶೇಷ.
ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಲಿಮಾ ಸ್ಕ್ವಾಡ್ರನ್ನಿಂದ ಬಂದಿದ್ದರೆ, ಇತರ ಇಬ್ಬರು ಮುಖ್ಯಸ್ಥರು ಎನ್ಡಿಎಯ ಜೂಲಿಯೆಟ್ ಸ್ಕ್ವಾಡ್ರನ್ನಿಂದ ಬಂದವರು. ಒಂದೇ ಬ್ಯಾಚ್ನ ಮೂವರು ಮುಖ್ಯಸ್ಥರು ಸೇನೆ, ವಾಯುಪಡೆ ಮತ್ತು ನೌಕಾಪಡೆಯ ನಡುವಿನ ಸಮನ್ವಯ ಮತ್ತು ತಂಡವನ್ನು ಉತ್ತಮಗೊಳಿಸುತ್ತಾರೆ ಎಂದು ವಿಶ್ಲೇಷಿಸಲಾಗಿದೆ.
ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿ, ಲೆಫ್ಟಿನೆಂಟ್ ಜನರಲ್ ಪಾಂಡೆ ಡಿಸೆಂಬರ್ 1982 ರಲ್ಲಿ ಕಾರ್ಪ್ಸ್ ಆಫ್ ಇಂಜಿನಿಯರ್ಸ್ನ ರೆಜಿಮೆಂಟ್ಗಳಲ್ಲಿ ಒಂದಾದ ಬಾಂಬೆ ಸಪ್ಪರ್ಸ್ಗೆ ನಿಯೋಜಿಸಲ್ಪಟ್ಟರು. ಅವರು ಯುನೈಟೆಡ್ ಕಿಂಗ್ಡಮ್ನ ಕ್ಯಾಂಬರ್ಲಿಯ ಸ್ಟಾಫ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ನಂತರ ಭಾರತಕ್ಕೆ ಮರಳಿದರು. ಮತ್ತು ಈಶಾನ್ಯದಲ್ಲಿ ಮೌಂಟೇನ್ ಬ್ರಿಗೇಡ್ ಮತ್ತು ಕಾರ್ಪ್ಸ್ನ ಬ್ರಿಗೇಡ್ ಮೇಜರ್ ಆಗಿ ನೇಮಕಗೊಂಡರು.
ಅವರ ಅಪ್ರತಿಮ ಸೇವೆಗಾಗಿ, ಅವರಿಗೆ ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಮತ್ತು ವಿಶಿಷ್ಟ ಸೇವಾ ಪದಕ ದೊರೆತಿದೆ.
39 ವರ್ಷಗಳ ಮಿಲಿಟರಿ ವೃತ್ತಿಜೀವನದಲ್ಲಿ ಲೆಫ್ಟಿನೆಂಟ್ ಜನರಲ್ ಪಾಂಡೆ ಅವರು 117 ಇಂಜಿನಿಯರ್ ರೆಜಿಮೆಂಟ್ ಮುಖ್ಯಸ್ಥರಾಗಿ ಗಡಿ ನಿಯಂತ್ರಣ ರೇಖೆಯ (LoC) ಉದ್ದಕ್ಕೂ ಸೇವೆ ಸಲ್ಲಿಸಿದ್ದಾರೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ LOC ಜೊತೆಗೆ ಪಲ್ಲನ್ವಾಲಾ ಸೆಕ್ಟರ್ನಲ್ಲಿ ಆಪರೇಷನ್ ಪರಾಕ್ರಮ್ ಸಮಯದಲ್ಲಿ ಇಂಜಿನಿಯರ್ ರೆಜಿಮೆಂಟ್ಗೆ ಕಮಾಂಡ್ ಆಗಿದ್ದರು. ಅವರು ಇಥಿಯೋಪಿಯಾ ಮತ್ತು ಎರಿಟ್ರಿಯಾದಲ್ಲಿ ವಿಶ್ವಸಂಸ್ಥೆಯ ಮಿಷನ್ನಲ್ಲಿ ಮುಖ್ಯ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.