ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೋಮವಾರ ಮೇ 4 ರವರೆಗೆ ರಾಜ್ಯದ ಎಲ್ಲಾ ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳ ರಜೆಯನ್ನು ರದ್ದುಗೊಳಿಸಿದ್ದಾರೆ ಮತ್ತು ರಜೆಯಲ್ಲಿರುವ ಎಲ್ಲರಿಗೂ 24 ಗಂಟೆಗಳ ಒಳಗೆ ಕರ್ತವ್ಯಕ್ಕೆ ವರದಿ ಮಾಡುವಂತೆ ಸೂಚಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಹಬ್ಬಗಳು ಇದ್ದು, ಈ ಹಿನ್ನೆಲೆಯಲ್ಲಿ ಶಾಂತಿ ಕಾಪಾಡಲು ಮುಂದಿನ 24 ಗಂಟೆಗಳಲ್ಲಿ ಧಾರ್ಮಿಕ ಮುಖಂಡರು ಮತ್ತು ಗಣ್ಯರೊಂದಿಗೆ ಸಂವಾದ ನಡೆಸುವಂತೆ ಪೊಲೀಸ್ ಠಾಣೆಗಳ ಎಡಿಜಿ ಹಂತದ ಅಧಿಕಾರಿಗಳಿಗೆ ಸೂಚಿಸಿರುವ ಅವರು, ಧಾರ್ಮಿಕ ಸ್ಥಳಗಳಲ್ಲಿ ಮೈಕ್ಗಳನ್ನು ಬಳಸಬಹುದು ಆದರೆ ಅವುಗಳ ಸ್ಥಾಪನೆಗೆ ಹೊಸ ಅನುಮತಿ ನೀಡಬಾರದು ಎಂದು ಹೇಳಿದ್ದಾರೆ.
‘ಎಸ್ಎಚ್ಒ, ಸಿಒ ಮತ್ತು ಜಿಲ್ಲಾ ಪೊಲೀಸ್ ಮುಖ್ಯಸ್ಥರಿಂದ ಜಿಲ್ಲಾ ಮ್ಯಾಜಿಸ್ಟ್ರೇಟ್, ವಿಭಾಗೀಯ ಆಯುಕ್ತರವರೆಗಿನ ಎಲ್ಲಾ ಆಡಳಿತ/ಪೊಲೀಸ್ ಅಧಿಕಾರಿಗಳ ರಜೆಯನ್ನು ತಕ್ಷಣವೇ ಜಾರಿಗೆ ಬರುವಂತೆ ಮೇ 4 ರವರೆಗೆ ರದ್ದುಗೊಳಿಸಲಾಗಿದೆ. ಪ್ರಸ್ತುತ ರಜೆಯಲ್ಲಿರುವವರು ಮುಂದಿನ 24 ಗಂಟೆಗಳ ಒಳಗೆ ನಿಯೋಜಿತ ಸ್ಥಳಕ್ಕೆ ಮರಳಬೇಕು. ಈ ವ್ಯವಸ್ಥೆಯನ್ನು ಮುಖ್ಯಮಂತ್ರಿಗಳ ಕಚೇರಿ ಖಚಿತಪಡಿಸಿಕೊಳ್ಳಬೇಕು’ ಎಂದು ಆದಿತ್ಯನಾಥ್ ಹೇಳಿದರು.
‘ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಬೇಕು ಮತ್ತು ಪರಿಸ್ಥಿತಿಯ ಮೇಲೆ ನಿಗಾ ಇಡಲು ಡ್ರೋನ್ಗಳನ್ನು ಬಳಸಬೇಕು. ಪ್ರತಿದಿನ ಸಂಜೆ ಪೊಲೀಸ್ ಪಡೆ ಫುಟ್ ಪೆಟ್ರೋಲಿಂಗ್ ಮಾಡಬೇಕು ಮತ್ತು ಪೊಲೀಸ್ ಪ್ರತಿಕ್ರಿಯೆ ವಾಹನಗಳು (ಪಿಆರ್ವಿ) ಸಕ್ರಿಯವಾಗಿರಬೇಕು” ಎಂದು ಹಿರಿಯ ಅಧಿಕಾರಿಗಳೊಂದಿಗೆ ಕಾನೂನು ಸುವ್ಯವಸ್ಥೆ ಪರಿಶೀಲನಾ ಸಭೆ ನಡೆಸಿದ ಅವರು ಹೇಳಿದರು.
‘ಮುಂದಿನ ದಿನಗಳಲ್ಲಿ ಹಲವು ಪ್ರಮುಖ ಧಾರ್ಮಿಕ ಉತ್ಸವಗಳು ನಡೆಯಲಿವೆ. ರಂಜಾನ್ ತಿಂಗಳು ನಡೆಯುತ್ತಿದೆ. ಈದ್ ಹಬ್ಬ ಮತ್ತು ಅಕ್ಷಯ ತೃತೀಯ ಒಂದೇ ದಿನ ನಡೆಯುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಈಗಿನ ವಾತಾವರಣವನ್ನು ಅವಲೋಕಿಸಿದರೆ ಪೊಲೀಸರು ಹೆಚ್ಚು ಸೂಕ್ಷ್ಮವಾಗಿ ವರ್ತಿಸಬೇಕಾಗುತ್ತದೆ’ ಎಂದರು.
ಪ್ರತಿಯೊಬ್ಬರಿಗೂ ಅವರವರ ಧಾರ್ಮಿಕ ಸಿದ್ಧಾಂತದ ಪ್ರಕಾರ ಅವರ ಪೂಜಾ ವಿಧಾನವನ್ನು ಅನುಸರಿಸಲು ಸ್ವಾತಂತ್ರ್ಯವಿದೆ ಎಂದು ಹೇಳಿದ ಮುಖ್ಯಮಂತ್ರಿ, ‘ಮೈಕ್ಗಳನ್ನು ಬಳಸಬಹುದಾದರೂ, ಆವರಣದಿಂದ ಶಬ್ದ ಬರದಂತೆ ನೋಡಿಕೊಳ್ಳಿ. ಬೇರೆಯವರಿಗೆ ಯಾವುದೇ ತೊಂದರೆ ಆಗಬಾರದು’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.