ಮಂಡ್ಯ : ಬೇಗನೆ ಹಾಳಾಗುವ ತರಕಾರಿ ಮತ್ತು ಹಣ್ಣುಗಳ ತಾಳಿಕೆ ಗುಣವನ್ನು ಐದರಿಂದ ಹತ್ತು ದಿನಗಳವರೆಗೆ ಹೆಚ್ಚಿಸಲು ಕೇಂದ್ರ ಆಹಾರ ಸಂಸ್ಕರಣಾ ಸಚಿವಾಲಯ ಉದ್ದೇಶಿಸಿದೆ. ಇದರಿಂದ ಅವು ಬೇಗನೆ ಹಾಳಾಗದೆ ಉಳಿದು ರೈತರಿಗೆ ಅಷ್ಟೇ ಅಲ್ಲ, ವ್ಯಾಪಾರಿಗಳಿಗೆ ಹಾಗು ತನ್ಮೂಲಕ ದೇಶಕ್ಕೆ ಅನುಕೂಲವಾಗುತ್ತದೆ ಎಂದು ಕೇಂದ್ರ ಆಹಾರ ಸಂಸ್ಕರಣಾ ಉದ್ಯಮ ಹಾಗು ಜಲಶಕ್ತಿ ಖಾತೆ ರಾಜ್ಯ ಸಚಿವರಾದ ಪ್ರಹ್ಲಾದ್ ಸಿಂಗ್ ಪಟೇಲ್ ಹೇಳಿದರು.
ಮಂಡ್ಯದ ಕೆ.ಆರ್. ಪೇಟೆ ತಾಲೂಕಿನ ಬನ್ನೇನ ಹಳ್ಳಿಯ ಮೆಗಾ ಫುಡ್ ಪಾರ್ಕ್ಗೆ ಭೇಟಿ ನೀಡಿ ಪರಿಶೀಲನೆ ನಂತರ ಮಾತನಾಡಿದರು. ಮೆಗಾ ಫುಡ್ ಪಾರ್ಕ್ಗಳ ಸ್ಥಾಪನೆ ನಿರ್ಣಯ ಈ ಹಿಂದಿನ ಸರ್ಕಾರದಲ್ಲೇ ಆಗಿದೆ. ಆದರೆ ಕೆಲಸ ಪೂರ್ಣಗೊಂಡಿಲ್ಲ. ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿರ್ಧಾರದಿಂದ ಫುಡ್ ಪಾರ್ಕ್ಗಳ ಕಾಮಗಾರಿ ಪೂರ್ಣಗೊಂಡು ರೈತರ ಕೃಷಿ ಉತ್ಪನ್ನಗಳ ಸಂರಕ್ಷಣೆಗೆ ಸಹಾಯಕವಾಗಲಿದೆ. ಇದರಿಂದ ಅವರ ಆದಾಯ ಹೆಚ್ಚಾಗಲಿದೆ. ಇದು ನಮ್ಮ ಸರ್ಕಾರದ ಉದ್ದೇಶ ಎಂದರು. ಹಾಗಾಗಿಯೇ ಅರ್ಧದಲ್ಲೇ ಕಾಮಗಾರಿ ನಿಂತುಹೋದ ಫುಡ್ ಪಾರ್ಕ್ನ ಪರಿಶೀಲನೆಗೆ ತಾವು ಆಗಮಿಸಿರುವುದಾಗಿ ಸಚಿವರು ತಿಳಿಸಿದರು
ಮೆಗಾ ಫುಡ್ ಪಾರ್ಕ್ ಕಾಮಗಾರಿ ಪೂರ್ಣಗೊಂಡರೆ ಕೃಷಿ ಉತ್ಪನ್ನಗಳ ಸಂರಕ್ಷಣೆಯ ಜೊತೆಗೆ ಉದ್ಯೋಗ ಸೃಷ್ಟಿಯೂ ಸಾಧ್ಯ ಎಂದ ಸಚಿವರು ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದರು. ರಾಜ್ಯ ಸರ್ಕಾರ ಪ್ರತಿ ಜಿಲ್ಲೆಯಲ್ಲೂ ಮಿನಿ ಫುಡ್ ಪಾರ್ಕ್ಗಳನ್ನು ಸ್ಥಾಪಿಸುವ ನಿರ್ಣಯ ಕೈಗೊಂಡಿರುವುದನ್ನು ಶ್ಲಾಘಿಸಿದ ಸಚಿವರು ಇಂತಹ ಉಪಕ್ರಮಗಳಿಂದ ರಫ್ತು ಹೆಚ್ಚಳ ಸಾಧ್ಯ ಎಂದರು.
ಪರಿಶೀಲನೆ ವೇಳೆ ಯುವಸಬಲೀಕರಣ ಮತ್ತು ಕ್ರೀಡಾ ಖಾತೆ ಸಚಿವ ಡಾ. ನಾರಾಯಣ ಗೌಡ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.