ಬೆಂಗಳೂರು: ಹಿಜಾಬ್ ವಿವಾದದ ಸಂದರ್ಭದಲ್ಲಿ ಕಾಲೇಜು ಆವರಣದೊಳಗೆ ಅಲ್ಲಾ-ಹು-ಅಕ್ಬರ್ ಎಂದು ಕೂಗಿದ ವಿದ್ಯಾರ್ಥಿನಿ ಮುಸ್ಕಾನ್ ಖಾನ್ಳನ್ನು ಶ್ಲಾಘಿಸಿ ಅಲ್ ಖೈದಾ ಮುಖ್ಯಸ್ಥ ಅಯ್ಮನ್ ಅಲ್ ಜವಾಹಿರಿ ವಿಡಿಯೋ ಬಿಡುಗಡೆ ಮಾಡಿದ್ದಾನೆ. ವೀಡಿಯೋದಲ್ಲಿ ಆತ ಮುಸ್ಕಾನ್ ನಮಗೆ ಪ್ರೇರಣೆ ನೀಡಿದ್ದಾಳೆ ಎಂದಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ಅಲ್ ಖೈದಾ ಮುಖ್ಯಸ್ಥ ವಿಡಿಯೋ ಮೂಲಕ ನೀಡಿರುವ ಹೇಳಿಕೆಯು ಹಿಜಾಬ್ ವಿವಾದದಲ್ಲಿ ಕಾಣದ ಕೈಗಳು ಭಾಗಿಯಾಗಿರುವುದನ್ನು ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ.
ಗೃಹ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಈ ಬೆಳವಣಿಗೆಗಳ ಮೇಲೆ ನಿಗಾ ಇರಿಸಿದ್ದಾರೆ ಮತ್ತು ವಿಷಯಗಳನ್ನು ಟ್ರ್ಯಾಕ್ ಮಾಡುತ್ತಿದ್ದಾರೆ ಎಂದು ಜ್ಞಾನೇಂದ್ರ ಹೇಳಿದ್ದಾರೆ.
“ನಾವು ಮೊದಲಿನಿಂದಲೂ ಕಾಣದ ಕೈಗಳು ವಿವಾದದ ಹಿಂದೆ ಇವೆ ಎಂದು ಹೇಳುತ್ತಲೇ ಬಂದಿದ್ದೇವೆ ಮತ್ತು ಹೈಕೋರ್ಟ್ ಕೂಡ ಹಿಜಾಬ್ ತೀರ್ಪಿನ ಸಂದರ್ಭದಲ್ಲಿ ಇದರ ಹಿಂದೆ ಕೆಲವು ಕಾಣದ ಕೈಗಳ ಸಾಧ್ಯತೆಯ ಶಂಕೆ ವ್ಯಕ್ತಪಡಿಸಿತ್ತು. ಈಗ ಅದು ಸಾಬೀತಾಗಿದೆ, ಏಕೆಂದರೆ ಅಲ್-ಖೈದಾದವರು ಈಗ ವೀಡಿಯೊಗಳನ್ನು ಬಿಡುಗಡೆ ಮಾಡುತ್ತಿದ್ದಾರೆ” ಎಂದಿದ್ದಾರೆ.
“ವಿಷಯಗಳು ಹೇಗೆ ನಡೆಯುತ್ತಿವೆ, ಇವರ ಸಂಬಂಧ ಏನು. ಈ ಎಲ್ಲಾ ವಿಷಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.