ಬೆಂಗಳೂರು: ಇಸ್ರೋದ ಮಾನವಸಹಿತ ಗಗನಯಾನ ಯೋಜನೆಗೆ ಸಂಬಂಧಿಸಿದಂತೆ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಮೊದಲ ಹಂತದ ಹಾರ್ಡ್ವೇರ್ ಅನ್ನು ಹಸ್ತಾಂತರಿಸಿದೆ.
ಬೆಂಗಳೂರಿನ ಎಚ್ಎಎಲ್ ಸಂಸ್ಥೆಯ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಎರಡನೇ ಹಂತದ ಪಿಎಸ್ಎಲ್ವಿ ರಾಕೆಟ್ ಜೋಡಣಾ ಕೇಂದ್ರವನ್ನು ಸೋಮವಾರ ಉದ್ಘಾಟಿಸಲಾಗಿದ್ದು, ಈ ವೇಳೆ ಎಚ್ಎಎಲ್ನಿಂದ ಇಸ್ರೋಗೆ ಗಗನಯಾನ ಕಕ್ಷಾ ವಾಹಕದ ರಚನೆಯನ್ನು ನೀಡಲಾಯಿತು.
ಈ ವೇಳೆ ಮಾತನಾಡಿದ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, “ಮಾನವ ಸಹಿತ ಗಗನಯಾನ ದೇಶದ ಪ್ರಸ್ತುತ ಹಾಗೂ ಭವಿಷ್ಯದ ಬಾಹ್ಯಾಕಾಶ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರವಹಿಸಲಿದೆ” ಎಂದರು.
“ಬಾಹ್ಯಾಕಾಶ ಮಿಷನ್ಗಳಲ್ಲಿ ಸ್ವದೇಶಿ ಮತ್ತು ಅಗ್ಗದ ಕಾರ್ಯಕ್ರಮ ಜಾರಿಗೆ ತರುವ ಸವಾಲಿನ ಕೆಲಸದಲ್ಲಿ ಎಚ್ಎಎಲ್ ಮಾತ್ರವಲ್ಲದೇ ಖಾಸಗಿಯವರ ಪಾತ್ರ ಕೂಡ ಬಹಳ ಮಹತ್ವದ್ದಾಗಿದೆ” ಎಂದು ಅವರು ಅಭಿಪ್ರಾಯಪಟ್ಟರು.
HAL hands over the first set of Gaganyaan hardware to ISRO, also PS2/GS2 stage integration facility inaugurated in Bengaluru. @isro @SpokespersonMoD @drajaykumar_ias @DefProdnIndia @gopalsutar pic.twitter.com/uqDLLZ1ETo
— HAL (@HALHQBLR) April 4, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.