ನವದೆಹಲಿ: ಉತ್ತರಪ್ರದೇಶದ ಗೋರಖನಾಥ ದೇವಸ್ಥಾನದ ಹೊರಗೆ ವ್ಯಕ್ತಿಯೊಬ್ಬ ಕತ್ತಿ ಹಿಡಿದು ನಡೆಸಿದ ದಾಳಿಯ ಹಿಂದೆ ದೊಡ್ಡ ಸಂಚು ಇರಬಹುದು ಎಂದು ಉತ್ತರ ಪ್ರದೇಶ ಸರ್ಕಾರದ ಗೃಹ ಇಲಾಖೆ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.
ಭಾನುವಾರ ರಾತ್ರಿ ಯುಪಿಯ ಗೋರಖ್ಪುರದ ಗೋರಖ್ನಾಥ್ ದೇವಸ್ಥಾನದಲ್ಲಿ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿಯ ಮೇಲೆ ಕೆಮಿಕಲ್ ಇಂಜಿನಿಯರ್ ಅಹ್ಮದ್ ಮುರ್ತಾಜಾ ಅಬ್ಬಾಸಿ ಎಂಬಾತ ದಾಳಿ ನಡೆಸಿದ್ದಾನೆ. ಘಟನೆಯ ವೀಡಿಯೋದಲ್ಲಿ ಆರೋಪಿ ಭದ್ರತಾ ಸಿಬ್ಬಂದಿಯನ್ನು ಕತ್ತಿ ಹಿಡಿದು ಹಿಂಬಾಲಿಸುತ್ತಿರುವುದು ಕಂಡು ಬಂದಿದೆ.
ಘಟನೆಯಲ್ಲಿಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.
ಸೋಮವಾರ ಹೇಳಿಕೆ ಬಿಡುಗಡೆ ಮಾಡಿರುವ, ಯುಪಿ ಗೃಹ ಇಲಾಖೆಯು, ಲಭ್ಯವಿರುವ ಪುರಾವೆಗಳ ಆಧಾರದ ಮೇಲೆ ದಾಳಿಯನ್ನು ಭಯೋತ್ಪಾದಕ ಘಟನೆ ಎಂದು ಕರೆಯಬಹುದು ಎಂದು ಹೇಳಿದೆ.
“ದಾಳಿಕೋರನು ಭಯೋತ್ಪಾದಕ ಕೃತ್ಯವನ್ನು ನಡೆಸಲು ದೇವಾಲಯದ ಆವರಣವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದನು, ಆದರೆ ಆತನ ಪ್ರಯತ್ನವನ್ನು ಕೆಚ್ಚೆದೆಯಿಂದ ಪೊಲೀಸ್ ಸಿಬ್ಬಂದಿ ವಿಫಲಗೊಳಿಸಿದರು” ಎಂದು ಹೇಳಿಕೆ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.