ನವದೆಹಲಿ: ಅಮೆರಿಕಾದಲ್ಲಿರುವ ಹಿಂದೂ ಸಮುದಾಯ ಮಹತ್ವದ ಕ್ಷಣವನ್ನು ಆನಂದಿಸಿದೆ, ನ್ಯೂಯಾರ್ಕ್ನ ಪ್ರಸಿದ್ಧ ಮತ್ತು ಪ್ರಮುಖ ದೇವಾಲಯದ ಹೊರಗಿನ ಬೀದಿಗೆ ‘ಗಣೇಶ್ ಟೆಂಪಲ್ ಸ್ಟ್ರೀಟ್’ ಎಂದು ಹೆಸರಿಸಲಾಗಿದೆ.
1977 ರಲ್ಲಿ ಉತ್ತರ ಅಮೆರಿಕಾದ ಹಿಂದೂ ಟೆಂಪಲ್ ಸೊಸೈಟಿ ವತಿಯಿಂದ ಸ್ಥಾಪಿತವಾದ ಶ್ರೀ ಮಹಾ ವಲ್ಲಭ ಗಣಪತಿ ದೇವಸ್ಥಾನವನ್ನು ಗಣೇಶ್ ಟೆಂಪಲ್ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ, ಇದು ಉತ್ತರ ಅಮೆರಿಕಾದಲ್ಲಿನ ಮೊದಲ ಮತ್ತು ಅತ್ಯಂತ ಹಳೆಯ ಹಿಂದೂ ದೇವಾಲಯವೆಂದು ಪರಿಗಣಿಸಲ್ಪಟ್ಟಿದೆ.
ಹಿಂದೂ ದೇವಾಲಯವು ಕ್ವೀನ್ಸ್ ಕೌಂಟಿಯ ಫ್ಲಶಿಂಗ್ನಲ್ಲಿದೆ. ದೇವಾಲಯದ ಹೊರಗಿನ ಬೀದಿಗೆ ಬೌನ್ ಸ್ಟ್ರೀಟ್ ಎಂದು ಕರೆಯಲಾಗುತ್ತದೆ. ಧಾರ್ಮಿಕ ಸ್ವಾತಂತ್ರ್ಯ ಮತ್ತು ಗುಲಾಮಗಿರಿ-ವಿರೋಧಿ ಚಳುವಳಿಯ ಪ್ರಮುಖ ಅಮೇರಿಕನ್ ಪ್ರವರ್ತಕ ಜಾನ್ ಬೌನ್ ಅವರ ಹೆಸರನ್ನು ಇಡಲಾಗಿದೆ.
ಶನಿವಾರದ ವಿಶೇಷ ಸಮಾರಂಭದಲ್ಲಿ, ಗಣೇಶ ದೇವಸ್ಥಾನದ ಗೌರವಾರ್ಥವಾಗಿ ಬೀದಿಗೆ ಗಣೇಶ್ ಟೆಂಪಲ್ ಸ್ಟ್ರೀಟ್ ಎಂದು ಹೆಸರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.