ಕೊಲಂಬೊ: ಶ್ರೀಲಂಕಾದ ಉತ್ತರ ಜಾಫ್ನಾದ ಮೂರು ದ್ವೀಪಗಳಲ್ಲಿ ಹೈಬ್ರಿಡ್ ವಿದ್ಯುತ್ ಯೋಜನೆಗಳನ್ನು ಅನುಷ್ಠಾನಗೊಳಿಸುವ ಒಪ್ಪಂದಕ್ಕೆ ಭಾರತ ಮತ್ತು ಶ್ರೀಲಂಕಾ ಸಹಿ ಹಾಕಿವೆ.
ಜನವರಿ 2021 ರಲ್ಲಿ, ಚೀನಾದ ಸಂಸ್ಥೆಯಾದ ಸಿನೋಸರ್-ಎಟೆಕ್ವಿನ್ಗೆ ಹೈಬ್ರಿಡ್ ನವೀಕರಿಸಬಹುದಾದ ಇಂಧನ ವ್ಯವಸ್ಥೆಯನ್ನು ಜಾಫ್ನಾ ಕರಾವಳಿಯ ನೈನಾತೀವು, ಡೆಲ್ಫ್ ಅಥವಾ ನೆಡುಂತೀವು ಮತ್ತು ಅನಲೈತಿವುಗಳಲ್ಲಿ ಸ್ಥಾಪಿಸುವ ಗುತ್ತಿಗೆಯನ್ನು ನೀಡಲಾಯಿತು, ಆದರೆ ಭಾರತವು ಆಕ್ಷೇಪಣೆಗಳನ್ನು ಎತ್ತಿದ್ದರಿಂದ ಈ ಬಗ್ಗೆ ಮರುಪರಿಶೀಲನೆ ನಡೆಸಲಾಯಿತು. ಮೂರು ದ್ವೀಪಗಳು ತಮಿಳುನಾಡಿಗೆ ಸಮೀಪದಲ್ಲಿವೆ.
ದ್ವಿಪಕ್ಷೀಯ ಸಭೆಗಳು ಮತ್ತು ಬಿಮ್ಸ್ಟೆಕ್ ಶೃಂಗಸಭೆಗಾಗಿ ಕೊಲಂಬೊದಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಶ್ರೀಲಂಕಾದ ವಿದೇಶಾಂಗ ಸಚಿವ ಜಿಎಲ್ ಪೀರಿಸ್ ಸೋಮವಾರ ಜಾಫ್ನಾದ ಮೂರು ದ್ವೀಪಗಳಲ್ಲಿ ಹೈಬ್ರಿಡ್ ವಿದ್ಯುತ್ ಯೋಜನೆಗಳ ಅನುಷ್ಠಾನದ ಕುರಿತು ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿದರು ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಬೆಲ್ಟ್ ಆಂಡ್ ರೋಡ್ ಇನಿಶಿಯೇಟಿವ್ (BRI) ಅಡಿಯಲ್ಲಿ ಶ್ರೀಲಂಕಾದಲ್ಲಿ ವಿವಿಧ ಮೂಲಸೌಕರ್ಯ ಯೋಜನೆಗಳಲ್ಲಿ ಚೀನಾ ಅತಿದೊಡ್ಡ ಹೂಡಿಕೆ ಮಾಡಿದೆ. ಆದರೆ ಚೀನಾ ಶ್ರೀಲಂಕಾವನ್ನು ಸಾಲದ ಬಲೆಯಲ್ಲಿ ಸಿಲುಕಿಸಿದೆ ಎಂಬುದಾಗಿ ಸ್ಥಳೀಯವಾಗಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳು ಕೇಳಿಬರುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.