ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸೋಮವಾರ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಜೊತೆ ನಂಟು ಹೊಂದಿದ್ದ ಇಬ್ಬರು ಭಯೋತ್ಪಾದಕರನ್ನು ಬಂಧಿಸಿದ್ದಾರೆ.
ಇಬ್ಬರು ಸಕ್ರಿಯ ಭಯೋತ್ಪಾದಕರಾದ ವಸೀಮ್ ಎ ಗನೈ ಮತ್ತು ಇಕ್ಬಾಲ್ ಎ ಶೇಖ್ ಅನ್ನು ಮಾರ್ಚ್ 28 ರ ಮುಂಜಾನೆ ಕಾಶ್ಮೀರದ ಬುದ್ಗಾಮ್ನ ಸುನ್ನೆರ್ಗುಂಡ್ ಪ್ರದೇಶದಲ್ಲಿ ಬಂಧಿಸಲಾಯಿತು. ಬಂಧಿತ ಇಬ್ಬರೂ ಉಗ್ರರು ಶೋಪಿಯಾನ್ಗೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ.
ಅವರಿಂದ ಚೈನೀಸ್ ಪಿಸ್ತೂಲ್, 2 ಪಿಸ್ತೂಲ್ ಮ್ಯಾಗಜೀನ್ಗಳು, 12 ಪಿಸ್ತೂಲ್ ರೌಂಡ್ಗಳು, 32 ಎಕೆ-47 ರೌಂಡ್ಗಳು ಸೇರಿದಂತೆ ಇತರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ಶನಿವಾರ ಬುದ್ಗಾಮ್ನಲ್ಲಿ ಉಗ್ರರು ವಿಶೇಷ ಪೊಲೀಸ್ ಅಧಿಕಾರಿ ಮತ್ತು ಅವರ ಸಹೋದರನನ್ನು ಗುಂಡಿಕ್ಕಿ ಕೊಂದ ಎರಡು ದಿನಗಳ ನಂತರ ಈ ಬಂಧನವಾಗಿದೆ.
ಅಲ್ಲದೇ ಕಳೆದ ಶನಿವಾರ ಶ್ರೀನಗರದ ಸೌರಾ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಜೆ ಪೊಲೀಸ್ ಪೇದೆ ಅಮೀರ್ ಹುಸೇನ್ ಲೋನ್ ಕೊಲ್ಲಲ್ಪಟ್ಟರು.
ಕಾಶ್ಮೀರದ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ವಿಜಯ್ ಕುಮಾರ್ ಅವರು 2022 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಇಲ್ಲಿಯವರೆಗೆ ಭಯೋತ್ಪಾದಕ ಸಂಘಟನೆಗಳ 150 ಭೂಗತ ಸದಸ್ಯರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.