ನವದೆಹಲಿ: ಅಮೆರಿಕಾ ಏರ್ ಫೋರ್ಸ್ನ ಸದಸ್ಯರಾಗಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರಿಗೆ ಕರ್ತವ್ಯದ ವೇಳೆ ತಿಲಕವನ್ನು ಧರಿಸಲು ಅನುಮತಿ ದೊರೆತಿದೆ. ವ್ಯೋಮಿಂಗ್ನಲ್ಲಿರುವ ಎಫ್ಇ ವಾರೆನ್ ಏರ್ ಫೋರ್ಸ್ ಬೇಸ್ನಲ್ಲಿ ನೆಲೆಸಿರುವ ಯುಎಸ್ ವಾಯುಪಡೆಯ ಏರ್ಮ್ಯಾನ್ ದರ್ಶನ್ ಶಾ ಅವರು ಧಾರ್ಮಿಕ ವಿನಾಯಿತಿಯ ಭಾಗವಾಗಿ ಕರ್ತವ್ಯದಲ್ಲಿರುವಾಗ ತಿಲಕವನ್ನು ಧರಿಸಲು ಅನುಮತಿ ಪಡೆದುಕೊಂಡಿದ್ದಾರೆ.
ವರದಿಯ ಪ್ರಕಾರ, ಎರಡು ವರ್ಷಗಳ ಹಿಂದೆ ಏರೋಸ್ಪೇಸ್ ವೈದ್ಯಕೀಯ ತಂತ್ರಜ್ಞರಾಗಿ ಸೇವೆಗೆ ಸೇರ್ಪಡೆಗೊಂಡ ದರ್ಶನ್, 90ನೇ ಆಪರೇಷನಲ್ ಮೆಡಿಕಲ್ ರೆಡಿನೆಸ್ ಸ್ಕ್ವಾಡ್ರನ್ಗೆ ನಿಯೋಜನೆಗೊಂಡಿದ್ದರು, ಅವರು ತಮ್ಮ ಸೇವೆಯ ಪ್ರಾರಂಭದಿಂದಲೂ ತಿಲಕ ಧರಿಸುವ ಅನುಮತಿಗಾಗಿ ಪ್ರಯತ್ನಿಸುತ್ತಲೇ ಬಂದಿದ್ದರು.
ಈ ವರ್ಷದ ಫೆಬ್ರವರಿ 22ರಂದು ಮೊದಲ ಬಾರಿಗೆ ಸಮವಸ್ತ್ರದಲ್ಲಿರುವಾಗ ದರ್ಶನ್ ಅವರಿಗೆ ತಿಲಕ ಧರಿಸಲು ಅನುಮತಿ ನೀಡಲಾಗಿದೆ.
“ಪ್ರತಿದಿನ ಕೆಲಸ ಮಾಡುವಾಗ ತಿಲಕ ಧರಿಸುವುದು ನನಗೆ ಮಹತ್ವದ್ದಾಗಿದೆ” ಎಂದು ಶಾ ಹೇಳಿದ್ದಾರೆ. “ತಿಲಕ ಧರಿಸಲು ನನಗೆ ಅನುಮತಿ ಸಿಕ್ಕ ಬಳಿಕ ನನ್ನ ಸಹೋದ್ಯೋಗಿಗಳು ನನಗೆ ಹ್ಯಾಂಡ್ಶೇಕ್ಗಳು, ಹೈ-ಫೈವ್ಗಳನ್ನು ನೀಡುತ್ತಿದ್ದಾರೆ ಮತ್ತು ನನ್ನನ್ನು ಅಭಿನಂದಿಸುತ್ತಾರೆ, ಏಕೆಂದರೆ ನಾನು ಈ ಧಾರ್ಮಿಕ ಅನುಮತಿಯನ್ನು ಪಡೆಯಲು ಎಷ್ಟು ಪ್ರಯತ್ನಿಸಿದ್ದೇನೆ ಎಂಬುದು ಅವರಿಗೆ ತಿಳಿದಿದೆ” ಎಂದಿದ್ದಾರೆ.
“ನಾವು ಧಾರ್ಮಿಕತೆಯನ್ನು ಪಾಲಿಸಲು ಮತ್ತು ನಮಗೆ ಬೇಕಾದುದನ್ನು ನಂಬಲು ಅನುಮತಿಸುವ ದೇಶದಲ್ಲಿ ನಾವು ವಾಸಿಸುತ್ತಿದ್ದೇವೆ. ಇದಕ್ಕಾಗಿ ಕೃತಜ್ಞನಾಗಿದ್ದೇನೆ” ಎಂದು ಏರೋಸ್ಪೇಸ್ ವೈದ್ಯಕೀಯ ತಂತ್ರಜ್ಞನಾಗಿರುವ ದರ್ಶನ್ ಶಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.