ಕಾನ್ಪುರ: ಒಂದು ಕಾಲದಲ್ಲಿ ರಾಷ್ಟ್ರಮಟ್ಟದ ಬಾಕ್ಸರ್ ಆಗಿ ಮಿಂಚಿ ಹಲವಾರು ಪದಕಗಳನ್ನು ಗೆದಿದ್ದ ಬಾಕ್ಸರ್ ಕಮಲ್ ಕುಮಾರ್ ಇದೀಗ ಕಾನ್ಪುರದಲ್ಲಿ ಮನೆಮನೆಗೆ ತೆರಳಿ ಕಸ ಸಂಗ್ರಹಿಸುವ ಕಾಯಕ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ರಾಷ್ಟ್ರಮಟ್ಟದಲ್ಲಿ ನಾಲ್ಕು ಚಿನ್ನದ ಪದಕ, ರಾಷ್ಟ್ರಮಟ್ಟದಲ್ಲಿ ಎರಡು ಕಂಚಿನ ಪದಕ ಗೆದ್ದಿರುವ ಇವರು ಈಗ ಯಾರಿಗೂ ಬಡವಾಗಿದ್ದಾರೆ.
‘ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದರೂ ನನಗೆ 4ನೇ ಗ್ರೇಡ್ ಉದ್ಯೋಗ ಪಡೆಯಲೂ ಸಾಧ್ಯವಾಗುತ್ತಿಲ್ಲ. ಇದು ನನಗೆ ಬೇಸರ ತರಿಸಿದೆ. ನನ್ನನ್ನು ಅವಲಂಭಿಸಿರುವ ಕುಟುಂಬದ ನಿರ್ವಹಣೆಗೆ ಕಸ ಸಂಗ್ರಹಿಸುವ ಕೆಲಸ ಮಾಡುವುದು ಅನಿವಾರ್ಯ’ ಎಂದು ಬೇಸರದಿಂದ ನುಡಿಯುತ್ತಾರೆ ಕುಮಾರ್.
ಪದಕಗಳನ್ನು ಗೆದ್ದು ಹೆಮ್ಮೆ ತಂದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನನ್ನನ್ನು ನಿರ್ಲಕ್ಷ್ಯಿಸಿದೆ ಎಂಬ ದುಃಖ ಅವರಲ್ಲಿದೆ. ಇದು ನಿಜಕ್ಕೂ ಈ ದೇಶದ ಕ್ರೀಡೆ ವಲಯಕ್ಕೆ ಸರ್ಕಾರ ಮಾಡಿದ ಅವಮಾನ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.