ನವದೆಹಲಿ: ಕಳೆದ ಒಂದೂವರೆ ವರ್ಷಗಳ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಪಾಕಿಸ್ಥಾನಕ್ಕೆ ಎಚ್ಚರಿಕೆಯ ಕರೆಗಂಟೆ ನೀಡಿದೆ. ಅದು ಆಕ್ರಮಿಸಿಕೊಂಡಿರುವ ಕಾಶ್ಮೀರದ ಜನತೆ ಇದೀಗ ಭಾರತದ ಪರ ನಿಲುವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಿದ್ದಾರೆ.
ಕಾಶ್ಮೀರದಲ್ಲಿ 2014ರಲ್ಲಿ ಸಂಭವಿಸಿದ ನೆರೆ ಮತ್ತು 2015ರಲ್ಲಿ ಸಂಭವಿಸಿದ ಭೂಕಂಪಕ್ಕೆ ಭಾರತ ಸರ್ಕಾರ ತೋರಿಸಿದ ಸ್ಪಂದನೆ ಅಲ್ಲಿನ ಜನತೆಯಲ್ಲಿ ಭಾರತದ ಬಗ್ಗೆ ಪ್ರೀತಿ ಹುಟ್ಟಿಸಿದೆ. ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೇ ಸೇರಲಿ ಎಂದು ಅವರು ಬಯಸುತ್ತಿದ್ದಾರೆ.
ಅಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಅಲ್ಲಿನ ಜನತೆಯನ್ನು ಕಂಗೆಡಿಸಿದೆ, ಶಾಂತಿಯುತವಾಗಿ ಬದುಕಲು ಬಯಸುತ್ತಿದ್ದಾರೆ. ಹೀಗಾಗಿ ಅವಕಾಶ ನೀಡಿದರೆ ಭಾರತದ ಪರವಾಗಿ ಮತ ಹಾಕಿ ಭಾರತವನ್ನು ಸೇರಿಕೊಳ್ಳುತ್ತೇವೆ ಎಂದು ಅಂಜುಮಾನ್ ಮಿನ್ಹಜ್ ಇ ರಸೂಲ್ ಮುಖ್ಯಸ್ಥ ದೆಹಲ್ವಿ ಹೇಳಿಕೊಂಡಿದ್ದಾರೆ.
ಬಲೂಚಿಸ್ತಾನ ಮತ್ತು ಕರಾಚಿಯ ಹಲವಾರು ಮಂದಿ ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಬಯಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಇಡೀ ಕಾಶ್ಮೀರ ನಮ್ಮದೆಂದು ವಾದಿಸುತ್ತಿರುವ ಪಾಕಿಸ್ಥಾನ ಮೊದಲು ತನ್ನ ಸುಪರ್ದಿಯಲ್ಲಿರುವ ಕಾಶ್ಮೀರಿಗರನ್ನು ರಕ್ಷಿಸಲಿ, ಅವರ ಭಾವನೆಯನ್ನು ಅರ್ಥೈಸಿಕೊಳ್ಳಲಿ, ಇಲ್ಲವಾದರೆ ಮುಂದೊಂದು ದಿನ ಅವರು ಪಾಕ್ ವಿರುದ್ಧ ಸಿಡಿದೇಳುವ ದಿನ ದೂರವಿರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.