ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಗುರುವಾರ ‘ಗ್ಲೋಬಲ್ ಹಿಂದೂ ಬುದ್ದಿಸ್ಟ್ ಕಾನ್ಕ್ಲೇವ್’ ನಡೆಯುತ್ತಿದ್ದು, ಇದರಲ್ಲಿ ಅನೇಕ ಬೌದ್ಧ ಧರ್ಮಗುರುಗಳು, ಆರ್ಟ್ ಆಫ್ ಲಿವಿಂಗ್ನ ರವಿಶಂಕರ್ ಗುರೂಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು.
ಈ ವೇಳೆ ಮಾತನಾಡಿದ ಮೋದಿ, ‘ನಮ್ಮ ನಾಡಿನಿಂದ ಗೌತಮ ಬುದ್ಧ ಬೌದ್ಧ ಧರ್ಮದ ಸಂದೇಶವನ್ನು ಜಗತ್ತಿಗೆ ಸಾರಿದ, ಇದು ಭಾರತೀಯರಿಗೆ ಹೆಮ್ಮೆಯ ಸಂಗತಿ. ಬುದ್ಧನ ಜೀವನ ಸೇವೆ, ತ್ಯಾಗ ಮತ್ತು ಸಹಾನುಭೂತಿಯ ಶಕ್ತಿಯನ್ನು ಸಾರಿದೆ’ ಎಂದರು.
ಸಂಪತ್ತು ಗಳಿಸುವುದು ಜೀವನ ಏಕಮಾತ್ರ ಉದ್ದೇಶವಲ್ಲ ಎಂಬುದನ್ನು ಬುದ್ಧ ಸಾರಿದ್ದಾನೆ, ಬೌದ್ಧ ಧರ್ಮ ಮತ್ತು ಪರಿಸರ ಪರಸ್ಪರ ಮಿಲಿತಗೊಂಡಿವೆ. ಹವಮಾನ ವೈಪರೀತ್ಯ ಈಗಿನ ದೊಡ್ಡ ಸವಾಲು, ಈ ಬಗ್ಗೆ ನಾನು ನರೆದ ಪುಸ್ತಕವನ್ನು ಎಪಿಜೆ ಅಬ್ದುಲ್ ಕಲಾಂ ಬಿಡುಗಡೆಗೊಳಿಸಿದ್ದರು ಎಂಬುದನ್ನು ಮೋದಿ ಈ ವೇಳೆ ಸ್ಮರಿಸಿಕೊಂಡರು.
ಚರ್ಚೆಗಳಿಂದ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ ಎಂಬ ದೃಢ ವಿಶ್ವಾಸ ನನ್ನದು. ಜಗತ್ತಿನಲ್ಲಿನ ಹಿಂಸೆಯ ವಿರುದ್ಧ ಶಾಂತಿ ಮಂತ್ರ ಪಠಿಸಬೇಕು ಎಂದರು.
ದೆಹಲಿಯ ವಿವೇಕಾನಂದ ಇಂಟರ್ನ್ಯಾಷನಲ್ ಫೌಂಡೇಶನ್ ಈ ಕಾನ್ಕ್ಲೇವನ್ನು ಏರ್ಪಡಿಸಿದ್ದು, ಇದು ಮೊದಲ ಹಿಂದೂ ಬೌದ್ಧ ಕಾನ್ಕ್ಲೇವ್ ಆಗಿದೆ. ಶಾಂತಿ ಸಂದೇಶ ಸಾರುವ ಉದ್ದೇಶದಿಂದ ಇದನ್ನು ಆಯೋಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.