ನವದೆಹಲಿ: ಕೊರೆಯುವ ಚಳಿಯಲ್ಲೂ ದೇಶವನ್ನು ಕಾಯುತ್ತಿದ್ದಾರೆ ನಮ್ಮ ವೀರ ಸೈನಿಕರು. ಗಡಿ ರಕ್ಷಣೆಯಲ್ಲಿ ನಿರತರಾದ ಸೈನಿಕರು ಕೆಲವೊಮ್ಮೆ ತಮ್ಮ ಸ್ಫೂರ್ತಿಯನ್ನು ಜೀವಂತವಾಗಿಡಲು ಕ್ರೀಡಾಕೂಟಗಳಲ್ಲಿ ಭಾಗಿಯಾಗುತ್ತಾರೆ. ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ ಪಡೆಯ ಯೋಧರು ಕೊರೆಯುವ ಚಳಿಯಲ್ಲಿ ಕಬ್ಬಡಿ ಆಡುತ್ತಿರುವ ವಿಡಿಯೋವೊಂದನ್ನು ಬಿಡುಗಡೆ ಮಾಡಲಾಗಿದೆ.
ಈ ವಿಡಿಯೋದಲ್ಲಿ ಐಟಿಬಿಪಿಯ (ITBP) ಯೋಧರು ಅಂದಾಜು 12,500 ಅಡಿ ಎತ್ತರದಲ್ಲಿರುವ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಕಬಡ್ಡಿ ಆಡುತ್ತಿದ್ದಾರೆ. ಐಟಿಬಿಪಿ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ.
“ಫುಲ್ ಆಫ್ ದಿ ಜೋಶ್, ಪ್ಲೇಯಿಂಗ್ ಇನ್ ದಿ ಸ್ನೋ” ಎಂಬ ಒಕ್ಕಣೆ ಬರೆದು ವಿಡಿಯೋ ಹಂಚಿಕೊಳ್ಳಲಾಗಿದೆ. ಫಿಟ್ ನೆಸ್ ಮೋಟಿವೇಷನ್, ಫಿಟ್ ಇಂಡಿಯಾ ಎನ್ನುವ ಹ್ಯಾಶ್ ಟ್ಯಾಗ್ ಅನ್ನೂ ಹಾಕಿದ್ದು, ಕೇಂದ್ರ ಸಚಿವರಾದ ಕಿರಣ್ ರಿಜಿಜು, ಅನುರಾಗ್ ಠಾಕೂರ್ ಹಾಗೂ ಫಿಟ್ ಇಂಡಿಯಾ ಖಾತೆಯನ್ನು ಟ್ಯಾಗ್ ಮಾಡಿದೆ.
ಮರಗಟ್ಟುವಂಥ ಚಳಿಯಲ್ಲಿ ಐಟಿಬಿಪಿ ಯೋಧರು, ಜಾಕೆಟ್ ಗಳು ಹಾಗೂ ಪ್ಯಾಡ್ ಗಳಿಂದ ತುಂಬಿದ್ದ ಡ್ರೆಸ್ ಗಳು ಮತ್ತು ಹಿಮದ ಮೇಲೆ ನಡೆಯಲು ಸಹಕಾರಿಯಾಗುವ ಬೂಟ್ ಗಳನ್ನು ಧರಿಸಿ ಕಬಡ್ಡಿ ಆಡಿದ್ದಾರೆ. ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಹಿಮಾಚಲಪ್ರದೇಶದ ಲಾಹೌಲ್-ಸ್ಪಿತಿ ಪ್ರದೇಶದಲ್ಲಿ ಕಬಡ್ಡಿ ಆಡಲಾಗಿದೆ. ಪ್ರಸ್ತುತ ಈ ಪ್ರದೇಶದ ತಾಪಮಾನ ಶೂನ್ಯ ಡಿಗ್ರಿ ಸೆಲ್ಸಿಯಸ್ ಗಿಂತಲೂ ಕೆಳಗೆ ಇಳಿದಿದೆ.
#WATCH 'Himveers' of Indo-Tibetan Border Police (ITBP) play Kabaddi in the snow in the high Himalayas in Himachal Pradesh pic.twitter.com/Ir146AhWTv
— ANI (@ANI) March 13, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.