ನವದೆಹಲಿ: ಡಿಟಿಎಚ್ ಟಿವಿ ಪೂರೈಕೆದಾರ ಟಾಟಾ ಸ್ಕೈ ಹೊಸ ವೈಫೈ ಸೆಟ್-ಟಾಪ್- ಬಾಕ್ಸ್ ಮತ್ತು ಡಿಜಿಟಲ್ ರೆಕಾರ್ಡರ್ ಬಿಡುಗಡೆ ಮಾಡಿದೆ. ಇದರಿಂದ ಮುಂಚಿತವಾಗಿ ರೆಕಾರ್ಡ್ ಮಾಡಲಾದ ವಿಷಯಗಳನ್ನು ಸ್ಮಾರ್ಟ್ಫೋನ್ ಮತ್ತು ಟ್ಯಾಬ್ಲೆಟ್ಗಳಲ್ಲಿ ದಾಖಲಿಸಬಹುದು. ಈ ಪ್ರೀ-ರೆಕಾರ್ಡೆಡ್ ಕಾರ್ಯಕ್ರಮಗಳನ್ನು ಟಾಟಾ ಸ್ಕೈ ಆ್ಯಪ್ಯ್ ಮೂಲಕ ಸೆಟ್-ಟಾಪ್- ಬಾಕ್ಸ್ನಿಂದ ಮೊಬೈಲ್ ಅಥವಾ ಟ್ಯಾಬ್ಲೆಟ್ಗಳಿಗೆ ವರ್ಗಾಯಿಸಿ ಆಫ್ಲೈನ್ನಲ್ಲೂ ವೀಕ್ಷಿಸಬಹುದು.
ಟಾಟಾ ಸ್ಕೈಯ ಈ ಹೊಸ ಉತ್ಪನ್ನ (500 ಜಿ.ಬಿ. ಸಂಗ್ರಹ ಸಾಮರ್ಥ್ಯ) ವೈಫೈ ಡಾಂಗಲ್ನೊಂದಿಗೆ 9,300 ರೂ. ಬೆಲೆ ಹೊಂದಿದ್ದು, ಮೆಟ್ರೋ ಹಾಗೂ 1 ಶ್ರೇಣಿಯ ಪಟ್ಟಣಗಳನ್ನು ಗುರಿಯಾಗಿಸಿದೆ. ಇದು ಟಾಟಾದ ಇತರ ಉತ್ಪನ್ನಗಳಂತೆ ಉತ್ತಮ ಬೆಳವಣಿಗೆ ಹೊಂದುವ ಭರವಸೆ ಇದೆ ಎಂದು ಇದರ ಮುಖ್ಯಸ್ಥೆ ಪಲ್ಲವಿ ಪುರಿ ತಿಳಿಸಿದ್ದಾರೆ.
ಟಾಟಾ ಸ್ಕೈಯು ಟಾಟಾ ಗ್ರೂಪ್ ಮತ್ತು 21ನೇ ಶತಮಾನದ ಫಾಕ್ಸ್ ನಡುವೆ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.