ವಾಷಿಂಗ್ಟನ್: ಗುಂಡು ತುಂಬಿದ್ದ ಬಂದೂಕಿನೊಂದಿಗೆ ಸೆಲ್ಫಿ ತೆಗೆಯುತ್ತಿದ್ದ ಯುವಕನೋರ್ವ ಆಕಸ್ಮಿಕವಾಗಿ ಬಂದೂಕು ಚಲಿಸಿ ಸಾವನ್ನಪ್ಪಿರುವ ಘಟನೆ ನೈಋತ್ಯ ಹ್ಯೂಸ್ಟಟನ್ನಲ್ಲಿ ನಡೆದಿದೆ.
ಡಿಲಿಯೊನ್ ಅಲೋನ್ಸೋ ಸ್ಮಿತ್(19)ನ ಗಂಟಲಿಗೆ ಗುಂಡು ತಗುಲಿದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಸ್ಮಿತ್ ಅವರಿಗೆ ಇಬ್ಬರು ಮಕ್ಕಳಿದ್ದು, ಅವರು ಕಾಲೇಜ್ಗೆ ಹೊರಟಿದ್ದರು ಎಂದು ಸ್ಮಿತ್ನ ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ.
ಈ ಹಿಂದೆ 21 ವರ್ಷದ ಓರ್ವ ಮಹಿಳೆ ಸೆಲ್ಫಿ ತೆಗೆಯುವ ಸಂದರ್ಭ ಆಕೆಯ ತಲೆಗೆ ಗುಂಡು ತಗುಲಿ ಗಂಭೀರ ಗಾಯಗೊಂಡಿದ್ದು, ಕೊನೆಗೂ ಪ್ರಾಣಾಪಾಯದಿಂದ ಪಾರಾಗಿದ್ದಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.