ನವದೆಹಲಿ: ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು 2021-22ನೇ ಸಾಲಿನ ಪ್ರಮುಖ ಬೆಳೆಗಳ ಉತ್ಪಾದನೆಯ ಎರಡನೇ ಮುಂಗಡ ಅಂದಾಜುಗಳನ್ನು ಬಿಡುಗಡೆ ಮಾಡಿದ್ದು, 316.06 ದಶಲಕ್ಷ ಟನ್ಗಳಷ್ಟು ದಾಖಲೆಯ ಆಹಾರ ಧಾನ್ಯಗಳ ಉತ್ಪಾದನೆ ಆಗಬಹುದು ಎಂದು ಅಂದಾಜಿಸಲಾಗಿದೆ.
ರೈತರ ಕಠಿಣ ಪರಿಶ್ರಮ, ವಿಜ್ಞಾನಿಗಳ ದಕ್ಷ ಸಂಶೋಧನೆ ಮತ್ತು ಸರ್ಕಾರದ ರೈತ ಸ್ನೇಹಿ ನೀತಿಗಳ ಫಲವಾಗಿ ದೇಶದಲ್ಲಿ ಆಹಾರ ಧಾನ್ಯ ಉತ್ಪಾದನೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಗಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂಗಡ ಅಂದಾಜಿನ ಪ್ರಕಾರ, ಭತ್ತ –127.93 ದಶಲಕ್ಷ ಟನ್, ಗೋಧಿ –111.32 ದಶಲಕ್ಷ ಟನ್, ಸಿರಿ ಧಾನ್ಯಗಳು –49.86 ದಶಲಕ್ಷ ಟನ್, ಮಕ್ಕೆ ಜೋಳ –32.42 ದಶಲಕ್ಷ ಟನ್, ಬೇಳೆಕಾಳುಗಳು –26.96 ದಶಲಕ್ಷ ಟನ್, ತೊಗರಿ –4.00 ದಶಲಕ್ಷ ಟನ್ , ಕಡಲೆಬೇಳೆ – 13.12 ದಶಲಕ್ಷ ಟನ್ , ಎಣ್ಣೆ ಕಾಳುಗಳು –37.15 ದಶಲಕ್ಷ ಟನ್ ಉತ್ಪಾದನೆಯಾಗಿ ದಾಖಲೆ ಬರೆಯಲಿದೆ.
2021-22ರ 2ನೇ ಮುಂಗಡ ಅಂದಾಜಿನ ಪ್ರಕಾರ, ದೇಶದಲ್ಲಿ ಒಟ್ಟು ಆಹಾರ ಧಾನ್ಯಗಳ ಉತ್ಪಾದನೆಯು ದಾಖಲೆಯ 316.06 ದಶಲಕ್ಷ ಟನ್ ಗಳು ಎಂದು ಅಂದಾಜಿಸಲಾಗಿದೆ, ಇದು 2020-21ರಲ್ಲಿ ಆಹಾರ ಧಾನ್ಯದ ಉತ್ಪಾದನೆಗಿಂತ 5.32 ದಶಲಕ್ಷ ಟನ್ ಗಳಷ್ಟು ಹೆಚ್ಚಾಗಿದೆ. ಇದಲ್ಲದೆ, 2021-22ರಲ್ಲಿ ಉತ್ಪಾದನೆಯು ಹಿಂದಿನ ಐದು ವರ್ಷಗಳ (2016-17 ರಿಂದ 2020-21ರವರೆಗೆ) ಆಹಾರ ಧಾನ್ಯಗಳ ಸರಾಸರಿ ಉತ್ಪಾದನೆಗಿಂತ 25.35 ದಶಲಕ್ಷ ಟನ್ ಗಳಷ್ಟು ಹೆಚ್ಚಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.