ನವದೆಹಲಿ: 2022 ರ ಜನವರಿಯಲ್ಲಿ ಭಾರತದ ಒಟ್ಟಾರೆ ರಫ್ತು ಸರಕುಗಳು ಮತ್ತು ಸೇವೆಗಳು ಸೇರಿ 61.41 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿಯ ರಫ್ತು ಶೇಕಡಾ 36.76 ರಷ್ಟು ಧನಾತ್ಮಕ ಬೆಳವಣಿಗೆಯನ್ನು ಮತ್ತು ಜನವರಿ 2020 ಕ್ಕಿಂತ 38.90 ಶೇಕಡಾ ಧನಾತ್ಮಕ ಬೆಳವಣಿಗೆಯನ್ನು ಪ್ರದರ್ಶಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಇದಲ್ಲದೆ, ಏಪ್ರಿಲ್-ಜನವರಿ 2021-22 ರಲ್ಲಿ ಭಾರತದ ಒಟ್ಟಾರೆ ರಫ್ತು 545.71 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ, ಕಳೆದ ವರ್ಷದ ಇದೇ ಅವಧಿಗಿಂದ 37.68 ಶೇಕಡಾ ಬೆಳವಣಿಗೆಯನ್ನು ಪ್ರದರ್ಶಿಸಿದೆ ಮತ್ತು ಏಪ್ರಿಲ್-ಜನವರಿ 2019-20 ಕ್ಕಿಂತ 23.29 ಶೇಕಡಾ ಹೆಚ್ಚಳವಾಗಿದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.
ಈ ನಡುವೆ, ಜನವರಿ 2022 ರಲ್ಲಿ ಒಟ್ಟಾರೆ ಆಮದುಗಳು 67.76 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ, ಕಳೆದ ವರ್ಷದ ಇದೇ ಅವಧಿಯಲ್ಲಿ 30.54 ಶೇಕಡಾ ಬೆಳವಣಿಗೆಯನ್ನು ಪ್ರದರ್ಶಿಸಿದೆ ಮತ್ತು ಜನವರಿ 2020 ಕ್ಕಿಂತ 30.19 ಶೇಕಡಾ ಧನಾತ್ಮಕ ಬೆಳವಣಿಗೆಯನ್ನು ಪ್ರದರ್ಶಿಸಿದೆ.
ಇದಲ್ಲದೆ, ಏಪ್ರಿಲ್-ಜನವರಿ 2021-22 ರಲ್ಲಿ ಒಟ್ಟಾರೆ ಆಮದುಗಳು 616.91 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ, ಇದು ಕಳೆದ ವರ್ಷದ ಇದೇ ಅವಧಿಯಲ್ಲಿ 54.35 ಶೇಕಡಾ ಬೆಳವಣಿಗೆಯನ್ನು ತೋರಿಸಿದೆ ಮತ್ತು ಏಪ್ರಿಲ್-ಜನವರಿ 2019-20 ಕ್ಕಿಂತ 20.15 ಶೇಕಡಾ ಹೆಚ್ಚಳವಾಗಿದೆ ಎಂದು ಸಚಿವಾಲಯ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.