ನವದೆಹಲಿ: ಉಕ್ರೇನ್ನಲ್ಲಿ ರಷ್ಯಾ ಆಕ್ರಮಣದ ಭೀತಿ ಆವರಿಸಿದೆ. ಈ ಹಿನ್ನೆಲೆಯಲ್ಲಿ ಉಕ್ರೇನ್ಗೆ ಅನಿವಾರ್ಯವಲ್ಲದ ಭೇಟಿಯನ್ನು ತಪ್ಪಿಸಿ ಎಂದು ಭಾರತ ಇಂದು ತನ್ನ ನಾಗರಿಕರಿಗೆ ಸಲಹೆಯನ್ನು ನೀಡಿದೆ.
ಅಲ್ಲದೇ ಉಕ್ರೇನ್ನಲ್ಲಿರುವ ಭಾರತೀಯ ಪ್ರಜೆಗಳು ನಿರ್ದಿಷ್ಟವಾಗಿ ಉಳಿದುಕೊಳ್ಳುವ ಅನಿವಾರ್ಯತೆ ಇಲ್ಲದ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಭಾರತಕ್ಕೆ ವಾಪಾಸ್ ಆಗುವ ಬಗ್ಗೆ ಚಿಂತನೆ ನಡೆಸಿದ ಎಂದು ಸಲಹೆ ನೀಡಿದೆ.
“ಉಕ್ರೇನ್ನಲ್ಲಿ ಪ್ರಸ್ತುತ ಪರಿಸ್ಥಿತಿಯು ಅನಿಶ್ಚಿತತೆಯಿಂದ ಕೂಡಿರುವ ಹಿನ್ನೆಲೆಯಲ್ಲಿ ಉಕ್ರೇನ್ನಲ್ಲಿರುವ ಭಾರತೀಯ ಪ್ರಜೆಗಳು, ವಿಶೇಷವಾಗಿ ವಾಸ್ತವ್ಯದ ಅಗತ್ಯವಿಲ್ಲದ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಭಾರತಕ್ಕೆ ಹೊರಟು ಬರುವುದನ್ನು ಪರಿಗಣಿಸುವುದು ಒಳಿತು” ಎಂದು ಸಲಹೆಯನ್ನು ನೀಡಲಾಗಿದೆ.
ವರದಿಗಳ ಪ್ರಕಾರ, ರಷ್ಯಾವು ಉಕ್ರೇನ್ ಗಡಿಯ ಬಳಿ 100,000 ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿದೆ. ಆದರೂ, ಆಕ್ರಮಣವನ್ನು ಯೋಜಿಸುತ್ತಿದೆ ಎಂಬ ಪಾಶ್ಚಿಮಾತ್ಯ ಆರೋಪಗಳನ್ನು ಅದು ನಿರಾಕರಿಸಿದೆ ಎಂದು ಮೂಲಗಳು ತಿಳಿಸಿವೆ.
ಉಕ್ರೇನ್ ಅಧ್ಯಕ್ಷರು ಕೂಡ ರಷ್ಯಾ ನಮ್ಮ ಮೇಲೆ ದಾಳಿ ನಡೆಸಲು ಯೋಜನೆ ಹಾಕಿದೆ ಎಂಬ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಡೀ ವಿಶ್ವದ ಕಣ್ಣು ರಷ್ಯಾ ಮತ್ತು ಉಕ್ರೇನ್ ಮೇಲೆ ನೆಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.