ವಾಷಿಂಗ್ಟನ್: ಪಾಕಿಸ್ಥಾನದ ಸಿಂಧ್ ಪ್ರಾಂತ್ಯ ಉಗ್ರರ ಸ್ವರ್ಗವಾಗಿ ಪರಿವರ್ತಿತಗೊಳ್ಳುತ್ತಿದೆ, ಹಲವು ಭಯೋತ್ಪಾದನ ಸಂಘಟನೆಗಳು ಇಲ್ಲಿ ಮದರಸಗಳನ್ನು ನಡೆಸುತ್ತಿದೆ, ಉಗ್ರ ಚಟುವಟಿಕೆಗಳನ್ನು ಹತ್ತಿಕ್ಕಲು ಪಾಕಿಸ್ಥಾನದ ರಾಜಕೀಯ ಸಂಪೂರ್ಣ ವಿಫಲವಾಗಿದೆ ಎಂದು ಅಮೆರಿಕ ಮೂಲದ ಸಿಂಧಿ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.
ಸಿಂಧಿ ಸಂಸ್ಥೆ ತನ್ನ ವರದಿ ‘ರೈಸ್ ಆಫ್ ರಿಲೀಜಿಯಸ್ ಎಕ್ಸ್ಟ್ರಿಮಿಸಂ ಇನ್ ಸಿಂಧ್’ನಲ್ಲಿ ಈ ಎಲ್ಲಾ ಅಂಶಗಳನ್ನು ಬಹಿರಂಗಪಡಿಸಿದೆ. ಮುಂಬಯಿ ಮೇಲಿನ ದಾಳಿಯನ್ನೂ ಸಿಂಧಿಯಲ್ಲಿನ ಕಂಟ್ರೋಲ್ ರೂಮ್ನಲ್ಲಿ ಕೂರು ಉಗ್ರರು ವೀಕ್ಷಿಸುತ್ತಿದ್ದರು ಎಂದು ಅದು ಹೇಳಿದೆ.
‘ಸಿಂಧ್ ಪ್ರಾಂತ್ಯದಲ್ಲಿ ಭಯೋತ್ಪಾದನ ಕೃತ್ಯ, ಧಾರ್ಮಿಕ ತೀವ್ರಗಾಮಿತನ ಸಂಪೂರ್ಣ ನಿರ್ನಾಮವಾಗುವ ಯಾವುದೇ ಸಾಧ್ಯತೆಗಳು ಕಂಡು ಬರುತ್ತಿಲ್ಲ. ಬಹಿರಂಗವಾಗಿ ಮತ್ತು ನಿರ್ಭಯವಾಗಿ ಉಗ್ರ ಚಟುವಟಿಕೆ ನಡೆಯುತ್ತಿರುವುದಕ್ಕೆ ಮತ್ತು ಉಗ್ರರನ್ನು ರಫ್ತು ಮಾಡುತ್ತಿರುವುದಕ್ಕೆ ಹಫೀಝ್ ಸೈಯದ್ ಮತ್ತು ಆತನ ಜಮಾತ್ ಉದ್ ದಾವಾ ಉತ್ತಮ ಉದಾಹರಣೆಯಾಗಿದೆ’ ಎಂದು ಅದು ಹೇಳಿದೆ.
ಸಿಂಧಿ ಜನರನ್ನು ‘ಕೊಂದು ಹಾಕಿ ಅಥವಾ ಹೂತಾಕಿ’ ಪಾಲಿಸಿಯನ್ನು ಪಾಕ್ ಸೇನೆ ಹೊಂದಿದೆ, ಇನ್ನೊಂದೆಡೆ ಉಗ್ರರು ಸಿಂಧಿ ಹಿಂದೂಗಳ ಧಾರ್ಮಿಕ ಕೇಂದ್ರಗಳನ್ನು ನಾಶಪಡಿಸುವ, ಅವರ ಮಕ್ಕಳನ್ನು ಮತಾಂತರ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಹಫೀಜ್ ಸಿಂಧ್ನಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ, ಹಿಂದೂಗಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವಂತೆ ಕರೆ ನೀಡುತ್ತಿದ್ದಾನೆ. ಅಲ್ಲದೇ ಮುಸ್ಲಿಂ ಯುವಕರನ್ನು ಕಾಶ್ಮೀರ ಜಿಹಾದ್ನಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡುತ್ತಾನೆ ಎಂದು ಅದು ಹೇಳಿದೆ.
ಇಷ್ಟೆಲ್ಲಾ ನಡೆಯುತ್ತಿದ್ದರೂ ಪಾಕ್ ಸರ್ಕಾರವಾಗಲಿ, ಸೇನೆಯಾಗಲಿ ಅದನ್ನು ತಡೆಯುವ ಮೂಡ್ನಲ್ಲಿ ಇಲ್ಲ ಎಂದು ಅದು ಆಪಾದಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.