ಜಮ್ಮು: ಕಳೆದ ಅನೇಕ ವರ್ಷಗಳಿಂದ ಕೋಮು ರಾಜಕೀಯ, ಭಯೋತ್ಪಾದನೆ ಮತ್ತು ಹಿಂಸೆಗಳಿಂದ ಜರ್ಜರಿತಗೊಂಡಿದ್ದ ಅಮರನಾಥ ಯಾತ್ರೆಯು ಈ ಬಾರಿ ವಿಭಿನ್ನತೆಯಿಂದ, ವಿಶೇಷ ಅನುಭವಗಳಿಂದ ಕೂಡಿತ್ತು.
ಉಗ್ರರ ಬೆದರಿಕೆ, ಆತಂಕಗಳ ನಡುವೆಯೂ ಯಾವುದೇ ಅನಾಹುತಗಳು ಸಂಭವಿಸದೇ ಯಾತ್ರೆಯು ಸಫಲಗೊಂಡಿದೆ ಎಂದು ಸಿಆರ್ಪಿಎಫ್ ವಕ್ತಾರ ಎ.ಕೆ. ಝಾ ತಿಳಿಸಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಸಿಆರ್ಪಿಎಫ್ ಜಮ್ಮುವಿನಿಂದ ಪಹಲ್ಗಾಂವ್ ಹಾಗೂ ಬಾಲ್ತಲ್ ಕಡೆಯಿಂದ ಬರುವ ಯಾತ್ರಿಗಳ ಭದ್ರತೆಗೆ ಮಹಿಳಾ ಭದ್ರತಾ ಪಡೆ ಸೇರಿದಂತೆ 67 ಪಡೆಗಳನ್ನು ನಿಯೋಜಿಸಿತ್ತು.
ಭಾರತದ ಅತ್ಯಂತ ಪ್ರಸಿದ್ಧ ತೀರ್ಥಯಾತ್ರಾ ಸ್ಥಳವಾದ ಅಮರನಾಥಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತಾದಿಗಳು ಆಗಮಿಸುತ್ತಾರೆ. ಇಲ್ಲಿ ಉಗ್ರರ ದಾಳಿ ನಡೆಯುವ ಭೀತಿ ಹೆಚ್ಚಾಗಿರುತ್ತದೆ. ಆ.1, 2000ರ ಅಮರನಾಥ ಯಾತ್ರೆಯಲ್ಲಿ 30 ಮಂದಿ ಸಾವನ್ನಪ್ಪಿದರೆ, 2011ರಲ್ಲಿ 3 ಬಾಂಬ್ಗಳನ್ನು ನಿಷ್ಕ್ರಿಯಗೊಳಿಸಿದ್ದರೆ, 20014ರಲ್ಲಿ ಯಾತ್ರಾರ್ಥಿಗಳ ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿದ್ದವು.
ಸಿಆರ್ಪಿಎಫ್ ಪಡೆ ಈ ಬಾರಿ ’ಆಪರೇಶನ್ ಶಿವ’ ಮೂಲಕ ಶಾಂತಿಯುತ ಯಾತ್ರೆ ನಡೆಯುವಂತೆ ಮಾಡಿತು. 2015ನೇ ಸಾಲಿನ ಯಾತ್ರೆಯಲ್ಲಿ 3,52,000 ಮಂದಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಎನ್ಎನ್ ವೊಹ್ರಾ ಸಿಆರ್ಪಿಎಫ್ನ ಪಡೆಗಳು ಹಾಗೂ ಯಾತ್ರಿಗಳನ್ನು ಶ್ಲಾಘಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.