ನವದೆಹಲಿ: ಭಾರತದ ಪ್ರಮುಖ 5 ರಾಜ್ಯಗಳಾದ ಗೋವಾ, ಮಣಿಪುರ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಪಂಜಾಬ್ಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿವೆ. ಅದಕ್ಕಾಗಿ ಭರ್ಜರಿ ಪ್ರಚಾ ಕಾರ್ಯಗಳು ಆರಂಭಗೊಂಡಿದೆ. ಅನಿವಾಸಿ ಭಾರತೀಯರು (ಎನ್ಆರ್ಐ) ಕೂಡ ಚುನಾವಣಾ ಪ್ರಚಾರಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ.
ಬಿಜೆಪಿಗೆ ಬೆಂಬಲವಾಗಿ ಅಮೆರಿಕಾದ ಸಿಲಿಕಾನ್ ವ್ಯಾಲಿಯಲ್ಲಿ ಕಾರು ರ್ಯಾಲಿ ನಡೆಸಲಾಗಿದೆ. ಇದರ ದೃಶ್ಯಗಳನ್ನು ಕಾರ್ಯಕರ್ತ ಗೌರವ್ ಪಟವರ್ಧನ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಹಲವಾರು ಕಾರುಗಳನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪೋಸ್ಟರ್ಗಳಿಂದ ಅಲಂಕರಿಸಲಾಗಿತ್ತು. ಬಿಜೆಪಿ ಧ್ವಜ ಮತ್ತು ಭಾರತೀಯ ತ್ರಿವರ್ಣ ಧ್ವಜವನ್ನು ಹಿಡಿದು ಜನ ಇದರಲ್ಲಿ ಭಾಗಿಯಾಗಿದ್ದಾರೆ.
ಯುನೈಟೆಡ್ ಸ್ಟೇಟ್ಸ್ನ ಬೇ ಪ್ರದೇಶದಲ್ಲಿ ನಡೆದ ಮೆಗಾ ರ್ಯಾಲಿಯ ಮತ್ತೊಂದು ವೀಡಿಯೊವನ್ನು ಟ್ವಿಟರ್ ಹ್ಯಾಂಡಲ್ ‘NRIs4Bharat’ ಹಂಚಿಕೊಂಡಿದೆ.ಈ ರ್ಯಾಲಿಯು ವಿಶೇಷವಾಗಿ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದೆ.
2019 ರಲ್ಲೂ ಮೋದಿಯನ್ನು ಮರು ಆಯ್ಕೆ ಮಾಡಲು ಅನಿವಾಸಿ ಭಾರತೀಯರು ಫೋನ್ ಕರೆಗಳ ಮೂಲಕ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರ ಕಾರ್ಯಗಳನ್ನು ನಡೆಸಿದ್ದರು.
ಈ ವರ್ಷದ ಜನವರಿ 8 ರಂದು, ಭಾರತದ ಚುನಾವಣಾ ಆಯೋಗವು 5 ರಾಜ್ಯಗಳಾದ ಗೋವಾ, ಪಂಜಾಬ್, ಮಣಿಪುರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿದೆ. ಫೆಬ್ರವರಿ 10, 2022 ರಿಂದ ಮಾರ್ಚ್ 7, 2022 ರವರೆಗೆ ಚುನಾವಣೆಗಳು ನಡೆಯಲಿದೆ.
#NRIs4India Car Rally in Silicon Valley 🇺🇸🇮🇳🚩
@BJP4India @BJP4UP @BJP4Goa @BJP4Punjab @BJP4UK @narendramodi @blsanthosh @myogiadityanath @harshcha @ankitchandelbjp @Abhishek_Mshra @kameshwarNM @vijai63 @amitmalviya @sunilbansalbjp @kpmaurya1 @gopalkagarwal @dpradhanbjp pic.twitter.com/Tc5xCbFCjq— Gaurav Patwardhan (@PatwardhanG81) February 7, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.