ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಸೆಕ್ಟರ್ನ ಅಂತರಾಷ್ಟ್ರೀಯ ಗಡಿಯಲ್ಲಿ ಡ್ರಗ್ಸ್ ಕಳ್ಳಸಾಗಣೆಗೆ ಯತ್ನಿಸಿದ ಮೂವರು ಪಾಕಿಸ್ಥಾನಿ ಸ್ಮಗ್ಲರ್ಗಳನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ ಭಾನುವಾರ ಗುಂಡಿಕ್ಕಿ ಕೊಂದಿದ್ದಾರೆ.
ಇವರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 180 ಕೋಟಿ ಮೌಲ್ಯದ 36 ಹೆರಾಯಿನ್ ಪ್ಯಾಕೆಟ್ ವಶಪಡಿಸಿಕೊಳ್ಳಲಾಗಿದೆ.
ಬಿಎಸ್ಎಫ್ ಪತ್ರಿಕಾ ಹೇಳಿಕೆಯಲ್ಲಿ ವಿಷಯ ತಿಳಿಸಿದ್ದು, “ಫೆ.6 ರ ಮುಂಜಾನೆ ಬಿಎಸ್ಎಫ್ ಜಮ್ಮುವಿನ ಸಾಂಬಾ ಅಂತರಾಷ್ಟ್ರೀಯ ಗಡಿಯ ಮೂಲಕ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದ 3 ಪಾಕ್ ಕಳ್ಳಸಾಗಣೆದಾರರನ್ನು ತಟಸ್ಥಗೊಳಿಸಿದೆ ಮತ್ತು 36 ಪ್ಯಾಕೆಟ್ (ಅಂದಾಜು 36 ಕೆಜಿ) ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ. ಈ ಮೂಲಕ ದೊಡ್ಡ ಕಳ್ಳಸಾಗಣೆ ಪ್ರಯತ್ನವನ್ನು ವಿಫಲಗೊಳಿಸಿದೆ. ಪ್ರದೇಶದಲ್ಲಿ ಹುಡುಕಾಟ ಪ್ರಗತಿಯಲ್ಲಿದೆ” ಎಂದಿದೆ.
ವರದಿಯ ಪ್ರಕಾರ, ಬಿಎಸ್ಎಫ್ ಕಳ್ಳಸಾಗಣೆದಾರರ ಚಲನವಲನವನ್ನು ಬೆಳಗಿನ ಜಾವ 2:30 ರ ಸುಮಾರಿಗೆ ಗುರುತಿಸಿದೆ. ನಂತರದ ಗುಂಡಿನ ದಾಳಿಯಲ್ಲಿ ಮೂವರು ಕಳ್ಳಸಾಗಾಣಿಕೆದಾರರು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳದಿಂದ ವಶಪಡಿಸಿಕೊಂಡ ಡ್ರಗ್ಸ್ ಹೆರಾಯಿನ್ ಎಂದು ಶಂಕಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.