ಹೈದರಾಬಾದ್: ಹೈದರಾಬಾದ್ನ ಪತಂಚೆರುವಿನಲ್ಲಿ ಅರೆ ಶುಷ್ಕ ಉಷ್ಣವಲಯದ ಅಂತರರಾಷ್ಟ್ರೀಯ ಬೆಳೆಗಳ ಸಂಶೋಧನಾ ಸಂಸ್ಥೆಯ (ICRISAT) 50 ನೇ ವಾರ್ಷಿಕೋತ್ಸವದ ಆಚರಣೆಗೆ ಪ್ರಧಾನಮಂತ್ರಿ ಶುಕ್ರವಾರ ಚಾಲನೆ ನೀಡಿದರು. ಅವರು (ICRISAT) ಸಸ್ಯ ಸಂರಕ್ಷಣೆ ಮತ್ತುರಾಪಿಡ್ ಜನರೇಷನ್ ಅಡ್ವಾನ್ಸ್ಮೆಂಟ್ ಫೆಸಿಲಿಟಿ ಕುರಿತು ಹವಾಮಾನ ಬದಲಾವಣೆ ಸಂಶೋಧನಾ ಸೌಲಭ್ಯವನ್ನು ಉದ್ಘಾಟಿಸಿದರು ಮತ್ತು ಸ್ಮರಣಾರ್ಥ ಅಂಚೆಚೀಟಿಯನ್ನು ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, 2070 ರ ಹೊತ್ತಿಗೆ ಶೂನ್ಯ ಹೊರಸೂಸುವಿಕೆ ಸಾಧಿಸುವ ಗುರಿಯನ್ನು ಭಾರತವು ನಿಗದಿಪಡಿಸಿದೆ ಎಂದಿದ್ದಾರೆ.
“ಭಾರತವು 2070 ರ ವೇಳೆಗೆ ನಿವ್ವಳ-ಶೂನ್ಯ ಗುರಿಯನ್ನು ಹೊಂದಿದೆ. ನಾವು ಪರಿಸರದ ಜೀವನಶೈಲಿಯ ಅಗತ್ಯವನ್ನು ಎತ್ತಿ ತೋರಿಸಿದ್ದೇವೆ ಮತ್ತು ಭೂಮಿ ಸ್ನೇಹಿ ಚಳುವಳಿಗೆ ಕರೆ ನೀಡಿದ್ದೇವೆ. ಇದು ಹವಾಮಾನ ಬದಲಾವಣೆಯನ್ನು ಎದುರಿಸಲು ನಿರ್ಣಾಯಕವಾಗಿದೆ ಮತ್ತು ಹವಾಮಾನದೊಂದಿಗೆ ಪ್ರತಿಯೊಬ್ಬ ವ್ಯಕ್ತಿಯನ್ನು ಸಂಪರ್ಕಿಸುತ್ತದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ICRISAT ಇತರ ರಾಷ್ಟ್ರಗಳಿಗೆ ಕೃಷಿಯನ್ನು ಸುಲಭ ಮತ್ತು ಸಮರ್ಥನೀಯವಾಗಿಸಲು ಸಹಾಯ ಮಾಡಿದ ಐದು ದಶಕಗಳ ಅನುಭವವನ್ನು ಹೊಂದಿದೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.