ತವಾಂಗ್: 104 ಅಡಿ ಎತ್ತರದ ರಾಷ್ಟ್ರಧ್ವಜವನ್ನು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರು ಗುರುವಾರದಂದು 10,000 ಅಡಿ ಎತ್ತರದಲ್ಲಿರುವ ತವಾಂಗ್ನಲ್ಲಿರುವ ನಂಗ್ಪಾ ನಾಟ್ಮೆ (ಬುದ್ಧ ಪಾರ್ಕ್) ನಲ್ಲಿ ಹಾರಿಸಿದರು. ಚೀನಾದ ಗಡಿಯಲ್ಲಿರುವ ಬೌದ್ಧ ಯಾತ್ರಿಕರ ಪಟ್ಟಣ ಇದಾಗಿದೆ.
ಎತ್ತರದ ದೃಷ್ಟಿಯಿಂದ ಇದು ದೇಶದ ಎರಡನೇ ಅತಿ ಎತ್ತರದ ರಾಷ್ಟ್ರಧ್ವಜವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಜೈ ಹಿಂದ್ ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಈ ರಾಷ್ಟ್ರೀಯ ಧ್ವಜದ ದೃಶ್ಯಗಳನ್ನು ಹಂಚಿಕೊಂಡಿರುವ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು, “ಅರುಣಾಚಲ ಪ್ರದೇಶದ ತವಾಂಗ್ನಲ್ಲಿ 10,000 ಅಡಿ ಎತ್ತರದಲ್ಲಿ 104 ಅಡಿ ಎತ್ತರದ ರಾಷ್ಟ್ರೀಯ ಧ್ವಜ” ಎಂದು ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ರಾಷ್ಟ್ರಧ್ವಜವನ್ನು ಅರುಣಾಚಲದ ಜನತೆಗೆ ಸಮರ್ಪಿಸಲಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ತಿಳಿಸಿದ್ದಾರೆ.
“ಅರುಣಾಚಲದ ದೇಶಭಕ್ತರಿಗೆ 104 ಅಡಿ ರಾಷ್ಟ್ರೀಯ ಧ್ವಜವನ್ನು ಅರ್ಪಿಸಲು ಹೆಮ್ಮೆಪಡುತ್ತೇನೆ, ಇದನ್ನು ಇಂದು 10000 ಅಡಿ ಎತ್ತರದಲ್ಲಿ ತವಾಂಗ್ನ ನ್ಗಾಂಗ್ಪಾ ನಾಟ್ಮೆ (ಬುದ್ಧ ಪಾರ್ಕ್) ನಲ್ಲಿ ಹಾರಿಸಲಾಗಿದೆ. ತವಾಂಗ್ ನಗರದ ಮೇಲಿರುವ ಈ ಸ್ಮಾರಕ ರಾಷ್ಟ್ರೀಯ ಧ್ವಜವು ದೇಶದ ಎರಡನೇ ಅತಿ ಎತ್ತರದಲ್ಲಿದೆ” ಎಂದು ಖಂಡು ಗುರುವಾರ ಟ್ವೀಟ್ ಮಾಡಿದ್ದಾರೆ.
A 104 feet tall National Flag at the altitude of 10,000 feet in Tawang, Arunachal Pradesh. #JaiHind 🇮🇳 pic.twitter.com/YETfB3nWwe
— Kiren Rijiju (@KirenRijiju) February 4, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.