ನವದೆಹಲಿ: ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ತನ್ನ ಅನುಭವವನ್ನು ಹಂಚಿಕೊಂಡ ಟೇಬಲ್ ಟೆನಿಸ್ ತಾರೆ ಮಣಿಕಾ ಬಾತ್ರಾ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಭಾರತದ ಹೆಮ್ಮೆ ಮತ್ತು ಕ್ರೀಡಾ ಚಾಂಪಿಯನ್ ಮಣಿಕಾ ಬಾತ್ರಾ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಅನುಭವವನ್ನು ಅದ್ಭುತವಾಗಿ ಹಂಚಿಕೊಂಡಿದ್ದಾರೆ. ನಿಮ್ಮೆಲ್ಲರನ್ನೂ ಸ್ಮಾರಕಕ್ಕೆ ಭೇಟಿ ನೀಡುವಂತೆ ನಾನು ಒತ್ತಾಯಿಸುತ್ತೇನೆ” ಎಂದು ಮೋದಿ ಟ್ವಿಟ್ ಮಾಡಿದ್ದಾರೆ.
1971 ರ ಇಂಡೋ-ಪಾಕ್ ಯುದ್ಧದ ವಾಯು ಪಡೆಯ ಯೋಧ ನಿರ್ಮಲ್ ಜಿತ್ ಸಿಂಗ್ ಸೆಖೋನ್ ಅವರಿಗೆ ಗೌರವ ಸಲ್ಲಿಸಲು ಟೇಬಲ್ ಟೆನಿಸ್ ತಾರೆ ಮಣಿಕಾ ಬಾತ್ರಾ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದರು. ಒಟ್ಟು 21 ಪರಮವೀರ ಚಕ್ರ ಪುರಸ್ಕೃತರ ವಾಯು ಪಡೆಯ ಧೀರನ ಪ್ರತಿಮೆಯನ್ನು ಸ್ಥಾಪಿಸಲಾಗಿರುವ ಸ್ಮಾರಕದಲ್ಲಿರುವ ‘ಪರಮ ಯೋಧ ಸ್ಥಳ’ ಹೆಸರಿನ ಶೌರ್ಯ ಗ್ಯಾಲರಿಯಲ್ಲಿ ಆಕೆ ಗೌರವ ಸಲ್ಲಿಸಿದರು.
“ನಮ್ಮ ಸೈನಿಕರು ಮಾಡಿದ ಯುದ್ಧ ಮತ್ತು ಅತ್ಯುನ್ನತ ತ್ಯಾಗದ ಬಗ್ಗೆ ಸ್ಮಾರಕದಲ್ಲಿ ಕೆತ್ತಲಾದ ಉಲ್ಲೇಖಗಳು ನನ್ನನ್ನು ಮಂತ್ರಮುಗ್ಧಳನ್ನಾಗಿಸಿದೆ. ಒಬ್ಬ ಭಾರತೀಯಳಾಗಿ, ಇಂದು ನನ್ನ ಹೃದಯವು ಕೃತಜ್ಞತೆ ಮತ್ತು ಹೆಮ್ಮೆಯಿಂದ ತುಂಬಿದೆ” ಎಂದು ಒಲಿಂಪಿಯನ್ ಹೇಳಿದ್ದಾರೆ.
ಯುದ್ಧ ವೀರ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರಿಗೆ ವರ್ಚುವಲ್ ಗೌರವ ಸಲ್ಲಿಸಿದ ಮಣಿಕಾ, “ಸ್ಮಾರಕದ ವಾಸ್ತುಶಿಲ್ಪದ ವಿನ್ಯಾಸವು ಹುತಾತ್ಮರನ್ನು ಅಮರರನ್ನಾಗಿ ಮಾಡುವ ರೀತಿಯಲ್ಲಿದೆ. ಮೊಬೈಲ್ ಅಪ್ಲಿಕೇಶನ್ ಆಧಾರಿತ ವರ್ಚುವಲ್ ಟೂರ್ ಗೈಡ್ ಮತ್ತು ವರ್ಚುವಲ್ ಗೌರವಕ್ಕಾಗಿ ಡಿಜಿಟಲ್ ಪ್ಯಾನೆಲ್ಗಳಂತಹ ನವೀಕರಿಸಿದ ಡಿಜಿಟಲ್ ಸೌಲಭ್ಯಗಳು ಗೌರವ ಸಲ್ಲಿಕೆಯನ್ನು ಸುಲಭವಾಗಿಸುತ್ತದೆ” ಎಂದಿದ್ದಾರೆ.
ವೀರ ಹುತಾತ್ಮರಿಗೆ ಗೌರವ ಸಲ್ಲಿಸುವ ಮತ್ತು ಸ್ಮಾರಕಕ್ಕೆ ಭೇಟಿ ನೀಡುವ ಎಲ್ಲ ಸಂದರ್ಶಕರ ಆಕರ್ಷಣೆಯ ಕೇಂದ್ರವಾಗಿರುವ ವಿಶಿಷ್ಟ ಸ್ಮರಣಿಕೆ ಮಳಿಗೆ ‘ಸ್ಮರಿಕಾ’ಕ್ಕೂ ಆಟಗಾರ್ತಿ ಭೇಟಿ ನೀಡಿದರು.
India’s pride and sporting champion @manikabatra_TT wonderfully shared her experience of visiting the National War Memorial.
I would urge you all to visit the Memorial too. https://t.co/2xmWCmhQgN
— Narendra Modi (@narendramodi) February 2, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.