ನವದೆಹಲಿ: ಜನವರಿಯಲ್ಲಿ ಸಂಗ್ರಹವಾದ ಒಟ್ಟು ಜಿಎಸ್ಟಿ ಆದಾಯ 1 ಲಕ್ಷದ 38 ಸಾವಿರದ 394 ಕೋಟಿ ರೂಪಾಯಿಗಳು. ಅದರಲ್ಲಿ ಸಿಜಿಎಸ್ಟಿ 24 ಸಾವಿರದ 674 ಕೋಟಿ ರೂಪಾಯಿ, ಎಸ್ಜಿಎಸ್ಟಿ 32 ಸಾವಿರ ಕೋಟಿ ರೂಪಾಯಿ, ಐಜಿಎಸ್ಟಿ 72 ಸಾವಿರ ಕೋಟಿ ರೂಪಾಯಿ ಮತ್ತು ಸೆಸ್ 9 ಸಾವಿರದ 674 ಕೋಟಿ ರೂಪಾಯಿ.
ಜನವರಿ 30, 2022 ರವರೆಗೆ ಸಲ್ಲಿಸಲಾದ ಒಟ್ಟು GSTR-3B ರಿಟರ್ನ್ಸ್ಗಳ ಸಂಖ್ಯೆ 1.05 ಕೋಟಿಯಷ್ಟಿದೆ ಮತ್ತು ಇದು 36 ಲಕ್ಷ ತ್ರೈಮಾಸಿಕ ರಿಟರ್ನ್ಸ್ಗಳನ್ನು ಒಳಗೊಂಡಿದೆ ಎಂದು ಸಚಿವಾಲಯ ತಿಳಿಸಿದೆ.
ಜಿಎಸ್ಟಿ ಸಂಗ್ರಹವು ಜನವರಿ ಸೇರಿದಂತೆ ಸತತ ನಾಲ್ಕನೇ ತಿಂಗಳು 1.30 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ ಎಂಬುದು ಗಮನಾರ್ಹ.
ಈ ವರ್ಷದ ಜನವರಿ ತಿಂಗಳ ಆದಾಯವು ಕಳೆದ ವರ್ಷದ ಇದೇ ತಿಂಗಳ ಜಿಎಸ್ಟಿ ಆದಾಯಕ್ಕಿಂತ 15% ಹೆಚ್ಚಾಗಿದೆ. ಜಿಎಸ್ಟಿ ಸಂಗ್ರಹವು ನಾಲ್ಕನೇ ಬಾರಿಗೆ 1. 30 ಸಾವಿರ ಕೋಟಿ ರೂಪಾಯಿಗಳ ಗಡಿ ದಾಟಿದೆ ಎಂದು ಸಚಿವಾಲಯ ತಿಳಿಸಿದೆ.
ಜಿಎಸ್ಟಿ ಕೌನ್ಸಿಲ್ ಕೈಗೊಂಡ ವಿವಿಧ ದರಗಳ ತರ್ಕಬದ್ಧ ಕ್ರಮಗಳಿಂದಲೂ ಆದಾಯದಲ್ಲಿ ಸುಧಾರಣೆಯಾಗಿದೆ ಎಂದು ಅದು ಹೇಳಿದೆ. ಮುಂಬರುವ ತಿಂಗಳುಗಳಲ್ಲಿಯೂ ಆದಾಯದಲ್ಲಿನ ಸಕಾರಾತ್ಮಕ ಪ್ರವೃತ್ತಿ ಮುಂದುವರಿಯುತ್ತದೆ ಎಂದು ಸಚಿವಾಲಯ ನಿರೀಕ್ಷಿಸಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.