ಬರ್ಲಿನ್: ಅಫ್ಘಾನಿಸ್ಥಾನದಲ್ಲಿನ ಮಾನವೀಯ ಬಿಕ್ಕಟ್ಟಿನ ಬಗ್ಗೆ ವಿಶ್ವ ಆಹಾರ ಕಾರ್ಯಕ್ರಮದ (ಡಬ್ಲ್ಯುಎಫ್ಪಿ) ಮತ್ತೊಮ್ಮೆ ಕಳವಳ ವ್ಯಕ್ತಪಡಿಸಿದ್ದು, ಅಫ್ಘಾನ್ ಜನರು ಬದುಕಲು ತಮ್ಮ ಮಕ್ಕಳು ಮತ್ತು ದೇಹದ ಭಾಗಗಳನ್ನು ಮಾರಾಟ ಮಾಡಲು ಮುಂದಾಗುತ್ತಿದ್ದಾರೆ ಎಂದಿದೆ.
ಅಫ್ಘಾನಿಸ್ಥಾನದ ಅರ್ಧದಷ್ಟು ಜನಸಂಖ್ಯೆಯು ಹಸಿವಿನಿಂದ ಬಳಲುತ್ತಿದೆ, ಹೀಗಾಗಿ ನೆರವು ವಿತರಣೆಯನ್ನು ತ್ವರಿತಗೊಳಿಸುವಂತೆ ಅಂತರರಾಷ್ಟ್ರೀಯ ಸಮುದಾಯವನ್ನು ಡಬ್ಲ್ಯುಎಫ್ಪಿ ಮುಖ್ಯಸ್ಥ ಡೇವಿಡ್ ಬೇಸ್ಲಿ ಒತ್ತಾಯಿಸಿದ್ದಾರೆ.
ಅಫ್ಘಾನಿಸ್ಥಾನವು ಬರ, ಸಾಂಕ್ರಾಮಿಕ, ಆರ್ಥಿಕ ಕುಸಿತ ಮತ್ತು ವರ್ಷಗಳ ಸಂಘರ್ಷದ ಪರಿಣಾಮಗಳೊಂದಿಗೆ ಹೋರಾಡುತ್ತಿದೆ. ಸುಮಾರು 24 ಮಿಲಿಯನ್ ಜನರು ತೀವ್ರ ಆಹಾರದ ಅಭದ್ರತೆಯನ್ನು ಅನುಭವಿಸುತ್ತಿದ್ದಾರೆ. ಈ ಚಳಿಗಾಲದಲ್ಲಿ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆಯು ಕ್ಷಾಮವನ್ನು ಎದುರಿಸಲಿದೆ ಮತ್ತು 97 ಪ್ರತಿಶತ ಜನಸಂಖ್ಯೆಯು ಈ ವರ್ಷ ಬಡತನ ರೇಖೆಯ ಕೆಳಗೆ ಬರಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
“ಅಫ್ಘಾನಿಸ್ಥಾನವು ಈಗಾಗಲೇ ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾಗಿದೆ, ಈಗ ನಾವು ಎದುರಿಸುತ್ತಿರುವುದು ದುರಂತವಾಗಿದೆ. 40 ಮಿಲಿಯನ್ ಜನರಲ್ಲಿ 23 ಮಿಲಿಯನ್ ಜನರು ಹಸಿವಿನ ಬಾಗಿಲು ಬಡಿಯುತ್ತಿದ್ದಾರೆ ” ಎಂದು ಬೀಸ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.