ನವದೆಹಲಿ: ಪ್ರಯಾಣವನ್ನು ಹೆಚ್ಚು ಆರಾಮದಾಯಕ ಮತ್ತು ಪ್ರಯಾಣಿಕರಿಗೆ ಹಿತವಾಗಿಸಲು, ಭಾರತೀಯ ರೈಲ್ವೇ ಹೊಸ ನಿಯಮಗಳನ್ನು ರಚಿಸಿದೆ. ಭಾರತೀಯ ರೈಲ್ವೆಯು ಜೋರಾಗಿ ಸಂಗೀತ ಹಾಕುವುದು ಮತ್ತು ಜೋರಾಗಿ ಫೋನ್ಗಳಲ್ಲಿ ಮಾತನಾಡುವುದನ್ನು ನಿಷೇಧಿಸುವ ಮೂಲಕ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಜೋರಾಗಿ ಮಾತನಾಡುವ ಅಥವಾ ಜೋರಾಗಿ ಸಂಗೀತ ಕೇಳಿ ಸಿಕ್ಕಿಬೀಳುವ ಪ್ರಯಾಣಿಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರೈಲ್ವೆ ಹೇಳಿದೆ. ಜೊತೆಗೆ ಯಾವುದೇ ಪ್ರಯಾಣಿಕರಿಗೆ ತೊಂದರೆಯಾದರೆ ಅದಕ್ಕೆ ರೈಲಿನ ಸಿಬ್ಬಂದಿಯೇ ಹೊಣೆಯಾಗುತ್ತಾರೆ ಎಂದಿದೆ.
ರೈಲ್ವೆ ಸಚಿವಾಲಯಕ್ಕೆ ಈ ಸಮಸ್ಯೆಗೆ ಸಂಬಂಧಿಸಿದಂತೆ ಹಲವು ದೂರುಗಳು ಬಂದಿರುವುದರಿಂದ ಈ ನಿಯಮಾವಳಿಗಳನ್ನು ಪರಿಚಯಿಸಲಾಗಿದೆ.
ಪ್ರಯಾಣಿಕರಿಗೆ ಯಾವುದೇ ಅನಾನುಕೂಲತೆ ಉಂಟಾಗದಂತೆ ಖಚಿತಪಡಿಸಿಕೊಳ್ಳಲು, ಆರ್ಪಿಎಫ್, ಟಿಕೆಟ್ ಚೆಕ್ಕರ್ಗಳು, ಕೋಚ್ ಅಟೆಂಡೆಂಟ್ಗಳು ಮತ್ತು ಕ್ಯಾಟರಿಂಗ್ ಸೇರಿದಂತೆ ರೈಲು ಸಿಬ್ಬಂದಿಯು ಪ್ರಯಾಣಿಕರನ್ನು ಯೋಗ್ಯ ಸಾರ್ವಜನಿಕ ನಡವಳಿಕೆಯನ್ನು ಕಾಪಾಡಿಕೊಳ್ಳುವಂತೆ ಕೇಳುವ ಜವಾಬ್ದಾರಿಯನ್ನು ವಹಿಸಲಿದ್ದಾರೆ.
ಗುಂಪುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ತಡರಾತ್ರಿಯವರೆಗೆ ಮಾತನಾಡಲು ಅನುಮತಿಸಲಾಗುವುದಿಲ್ಲ ಮತ್ತು ದೀಪಗಳನ್ನು ಮಿತವಾಗಿ ಬಳಕೆ ಮಾಡುವಂತೆಯೂ ಎಂದು ಹೊಸ ನಿಯಮಗಳು ಹೇಳುತ್ತವೆ. ನಿಯಮಗಳನ್ನು ಪಾಲಿಸದ ಪ್ರಯಾಣಿಕರನ್ನು ರೈಲ್ವೆ ಕಾಯಿದೆ ನಿಬಂಧನೆಗಳ ಪ್ರಕಾರ ಕಟ್ಟುನಿಟ್ಟಾಗಿ ವ್ಯವಹರಿಸಲಾಗುವುದು ಎಂದು ರೈಲ್ವೆ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.