ಶ್ರೀನಗರ: ಚಳಿಗಾಲದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಈ ನಿಟ್ಟಿನಲ್ಲಿ ಆಡಳಿತದ ಗಮನವನ್ನು ಸೆಳೆಯಲು ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶದಲ್ಲಿ ವಾಸಿಸುವ ಗುರೇಜ್ನ ಜನರು ಹೆಪ್ಪುಗಟ್ಟುವ ಹಿಮ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಿದ್ದಾರೆ.
ಗುರೆಜ್ನ ಗಡಿ ಕಣಿವೆಯ ಮಾರ್ಕೂಟ್, ಅಚುರಾ ಮತ್ತು ಬಾಗ್ಟೋರ್ ಸೇರಿದಂತೆ ತಪ್ಪಲಿನ ಹಳ್ಳಿಗಳ ನಿವಾಸಿಗಳು ಹಿಮದಿಂದ ಆವೃತವಾದ ಮೈದಾನದಲ್ಲಿ ಎರಡು ಹಿಮ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಿದ್ದಾರೆ.
ಹಲವು ವರ್ಷಗಳಿಂದ ಹೆಪ್ಪುಗಟ್ಟಿದ ಮೈದಾನದಲ್ಲಿನ ಕ್ರಿಕೆಟ್ ಆಡುವುದು ಗುರೆಜ್ನ ನಿವಾಸಿಗಳ ಜನಪ್ರಿಯ ಕಾರ್ಯವಾಗಿದೆ. ಏಕೆಂದರೆ ಈ ಸ್ಥಳವು ಚಳಿಗಾಲದ ಕ್ರೀಡೆಗಳ ಕೇಂದ್ರವಾಗುವ ಸಾಮರ್ಥ್ಯವನ್ನು ಹೊಂದಿದೆ. ಕಣಿವೆಯ ಇತರ ಭಾಗಗಳಲ್ಲಿ ವಿಭಿನ್ನ ಚಳಿಗಾಲದ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತದೆ. ಆದರೆ ಗುರೆಜ್ನಲ್ಲಿ ಇದೇ ರೀತಿಯ ಕ್ರೀಡೆಗಳನ್ನು ಆಯೋಜಿಸಲಾಗುತ್ತಿಲ್ಲ, ಹೀಗಾಗು ಆಡಳಿತದ ಗಮನವನ್ನು ಸೆಳೆಯಲು ಜನರು ಕ್ರಿಕೆಟ್ ಆಯೋಜಿಸಿದ್ದಾರೆ. ಗುರೆಜ್ ಆಕರ್ಷಣೆಯ ಕೇಂದ್ರವಾಗಿ ಉಳಿಯಬೇಕು ಎಂಬುದು ಇವರ ಮಹದಾಸೆಯಾಗಿದೆ.
ಗುರೆಜ್ನಲ್ಲಿ ಚಳಿಗಾಲದ ಕ್ರೀಡಾ ಚಟುವಟಿಕೆಗಳಿಗೆ ಸಾಕಷ್ಟು ಸಾಮರ್ಥ್ಯವಿರುವುದರಿಂದ ಈ ಪ್ರದೇಶದತ್ತ ಸರ್ಕಾರದ ಗಮನವನ್ನು ಸೆಳೆಯುವುದು ಈ ಪಂದ್ಯಾವಳಿ ಆಯೋಜನೆಯ ಹಿಂದಿನ ಮುಖ್ಯ ಉದ್ದೇಶ ಎಂದು ನಿವಾಸಿಗಳು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.