ಇಸ್ಲಾಮಾಬಾದ್: ಗಿಲ್ಗಿಟ್-ಬಲ್ಟಿಸ್ತಾನ್ನಲ್ಲಿ ಆಹಾರ ಪೂರೈಕೆಯ ಕೊರತೆ ಮತ್ತು ಬ್ಲ್ಯಾಕ್ ಮಾರ್ಕೆಟಿಂಗ್ ಕುರಿತು ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಸರ್ಕಾರದ ವಿರುದ್ಧ ಜನರು ಪ್ರತಿಭಟನೆ ನಡೆಸಿದರು.
ಪಿಟಿಐ ನೇತೃತ್ವದ ಸ್ಥಳೀಯ ಆಡಳಿತದ ವಿರುದ್ಧ ಗಿಲ್ಗಿಟ್ ನಗರ ಮತ್ತು ಇತರ ಪ್ರಮುಖ ಪಟ್ಟಣಗಳಲ್ಲಿ ಬೀದಿ ಪ್ರತಿಭಟನೆಗಳು ನಡೆದವು ಎಂದು ಜಸ್ಟ್ ಅರ್ಥ್ ನ್ಯೂಸ್ ವರದಿ ಮಾಡಿದೆ.
ಗಿಲ್ಗಿಟ್-ಬಲ್ಟಿಸ್ತಾನ್ನ ಜನರು ಕಠಿಣ ಚಳಿಗಾಲದಲ್ಲಿ ಬದುಕಲು ಕಷ್ಟಪಡುತ್ತಿದ್ದಾರೆ, ಮೂಲಭೂತ ಸೌಕರ್ಯಗಳ ಕೊರತೆಯನ್ನು ಹೊಂದಿದ್ದಾರೆ. ದಿನನಿತ್ಯದ ಅಗತ್ಯ ವಸ್ತುಗಳ ಬ್ಲಾಕ್ ಮಾರ್ಕೆಟಿಂಗ್ ಮತ್ತು ಸರ್ಕಾರದ ಭ್ರಷ್ಟಾಚಾರವು ಜನರ ಜೀವನವನ್ನು ದುಸ್ತರ ಮಾಡಿದೆ ಎಂದು ವರದಿ ಹೇಳಿದೆ.
“ಪಾಕಿಸ್ತಾನ ಸೇನೆಯ ಆಜ್ಞೆಯ ಮೇರೆಗೆ ಸ್ಥಳೀಯ ಆಡಳಿತವು ಉಗ್ರಗಾಮಿಗಳಿಗೆ ಒಲವು ತೋರುವ ಹಂತಕ್ಕೆ ಭ್ರಷ್ಟಾಚಾರ ಹರಡಿದೆ” ಎಂದು ಮೂಲಗಳು ತಿಳಿಸಿವೆ.
ಜಸ್ಟ್ ಅರ್ಥ್ ನ್ಯೂಸ್ ಪ್ರಕಾರ, ಗಿಲ್ಗಿಟ್-ಬಾಲಿಸ್ತಾನ್ ಜನರು ತಮ್ಮ ತಕ್ಷಣದ ಕುಂದುಕೊರತೆಗಳನ್ನು ನೀಗಿಸುವಂತೆ ಒತ್ತಾಯಿಸಿ ಪ್ರತಿಭಟಿಸುತ್ತಿದ್ದಾರೆ, ಅಲ್ಲಿ ಏಳು ದಶಕಗಳಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಪಾಕಿಸ್ತಾನಿ ಸರ್ಕಾರ ವಿಫಲವಾಗಿದೆ.
ಇದಕ್ಕೂ ಮೊದಲು ಜನವರಿ 11 ರಂದು, ಗಿಲ್ಗಿಟ್-ಬಾಲ್ಟಿಸ್ತಾನ್ ಮೂಲದ ಅವಾಮಿ ಆಕ್ಷನ್ ಕಮಿಟಿ (ಎಎಸಿ)ಯು ಈ ಪ್ರದೇಶದಲ್ಲಿ ಭಾರೀ ಹಿಮಪಾತದ ನಡುವೆ ಪುನರಾವರ್ತಿತ ಮತ್ತು ದೀರ್ಘಕಾಲದ ವಿದ್ಯುತ್ ಕೊರತೆ ಮತ್ತು ಆಹಾರ ಪದಾರ್ಥಗಳ ಬಿಕ್ಕಟ್ಟಿನ ವಿರುದ್ಧ ಸ್ಕಾರ್ಡುದಲ್ಲಿ ಪ್ರತಿಭಟನೆ ನಡೆಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.